ಬೆಂಗಳೂರು: ಲೌಡ್ ಸ್ಪೀಕರ್ ಅಜಾನ್ ವಿಷಯದಲ್ಲಿ ನಾವು ಕಾಂಗ್ರೆಸ್ಸಿಗರು ಮುಸ್ಲಿಂ ಪರವಾಗಿಯೇ ನಿಲ್ಲುತ್ತೇವೆ. ನಮ್ಮ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದರೆ ಕಾಂಗ್ರೆಸ್ ಸುಮ್ಮನೆ ಕೂಡ್ರ ಬೇಕೆ? ಶೋಷಿತರು, ಅಲ್ಪಸಂಖ್ಯಾತರ ಪರವಾಗಿಯೇ ನಿಲ್ಲುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಖಂಡತುಂಡವಾಗಿ ಹೇಳಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮಾನ್ ಚಾಲೀಸಾ ಆಗಲಿ, ರಾಮ ಭಕ್ತರೇ ಆಗಲಿ ಇಷ್ಟುದಿನ ಇವರು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು
ಮುಂಬರುವ 2023ರ ರಾಜ್ಯ ವಿಧಾನಸಭೆ ಹಾಗೂ 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಈ ಲೌಡ್ ಸ್ಪೀಕರ್ ಅಭಿಯಾನ ನಡೆಸುತ್ತಿದೆ ಎಂದು ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲಿ, ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತೆಯೋ ಅಲ್ಲಿ ಕಾಂಗ್ರೆಸ್ ಮುಂದಾಳತ್ವದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಿಗದಿಪಡಿಸಿದ ಗಡುವಿನೊಳಗೆ ಅನುಮತಿ ಪಡೆಯದ ಧ್ವನಿವರ್ಧಕಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸೂಚಿಸಿದೆ.
ಸುಪ್ರಿಂ ಕೋರ್ಟ್ ಆದೇಶ ಗಾಳಿಗೆ ತೂರಿದ್ದಲ್ಲದೆ, ಬೆಳಗಿನ ಜಾವ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿರುವ ಅನಧಿಕೃತ ಲೌಡ್ ಸ್ಪೀಕರ್ ಬಂದ್ ಮಾಡಲು ಸರಕಾರ ಕ್ರಮಕೈಗೊಳ್ಳಲು ಮುಂದಾಗಿದೆ.
ಆದರೆ ಸಹಜವಾಗಿ ಇದಕ್ಕೆ ಜಾತಿ ಬಣ್ಣ ಅಂಟಿಕೊಂಡಿದೆ. ಮುಸ್ಲಿಂ ಸಮುದಾಯದ ಬೆಳಗಿನ ಜಾವದ ಅಜಾನ್ ಗೆ ಪ್ರತಿಯಾಗಿ ಶ್ರೀರಾಮ ಸೇನೆಯವರು ದೇವಸ್ಥಾನಗಳಲ್ಲಿ ಭಜನೆ ಸಂಗೀತ ಕಾರ್ಯಕ್ರಮ ನಡೆಸಿದ್ದಾರೆ.
PublicNext
11/05/2022 07:04 pm