ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರಳಾತಿ ಸರಳ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ !

ಸರಳ ಜೀವನ ಅತ್ಯಂತ ವಿರಳ ಈ ದಿನ. ಹೌದು. ಇದು ಸತ್ಯವಾದ ಮಾತು. ಸ್ವಲ್ಪ ಅಧಿಕಾರ ಸಿಕ್ಕರೆ ಸಾಕು. ಅಹಂ ಅನ್ನೋದು ಪೀಕ್‌ ನಲ್ಲಿಯೇ ಇರುತ್ತದೆ. ಆದರೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿಜಕ್ಕೂ ಸರಳಾತಿ ಸರಳ ವ್ಯಕ್ತಿತ್ವದ ಮಿನಿಸ್ಟರ್. ಅದಕ್ಕೆ ಸಾಕ್ಷಿ ಒಂದಿದೆ. ಆ ವೀಡಿಯೋ ಇಲ್ಲಿದೆ ನೋಡಿ.

ನಿರ್ಮಲಾ ಸೀತಾರಾಮನ್ ಸರಳ ವ್ಯಕ್ತಿತ್ವದ ಸಚಿವೆ ಅಂತ ಎಲ್ಲರಿಗೂ ಗೊತ್ತಿಲ್ಲ. ಆದರೆ ಅವರನ್ನೊಮ್ಮೆ ನೋಡಿದ್ರೆ, ಸಾತ್ವಿಕ ಮನಸ್ಥಿತಿಯ ಸಚಿವೆ ಅಂತ ಅನಿಸುತ್ತದೆ. ಹಾಗೇನೆ ಅವರು ತೀರಾ ಸರಳವಾಗಿಯೇ ಇದ್ದಾರೆ ಅಂತಲೂ ಒಂದೊಮ್ಮೆ ಅನಿಸದೇ ಇರದು. ಅದಂತೆ ಈ ವೀಡಿಯೋ ಆ ಸತ್ಯವನ್ನೆ ಹೇಳ್ತಿದೆ ನೋಡಿ.

ಅಂದ್ಹಾಗೆ ಇಲ್ಲೊಂದು ಕಾರ್ಯಕ್ರಮ ನಡೆಯುತ್ತಿತ್ತು. ಆಗ ಡಯಾಸ್ ಮೇಲೆ ಮಹಿಳಾ ಗಣ್ಯ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದರು. ಇದೇ ವೇದಿಕೆ ಮೇಲೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಇದ್ದರು. ಆದರೆ, ಆ ಕ್ಷಣಕ್ಕೆ ಮಾತನಾಡುತ್ತಿದ್ದ ಗೆಸ್ಟ್ ಗೆ ನೀರಿನ ಅವಶ್ಯಕತೆನೂ ಇತ್ತು ಅನಿಸುತ್ತದೆ. ಆ ಕೂಡಲೇ ಏನು ಯೋಚನೆ ಮಾಡದೇ, ನಿರ್ಮಲಾ ಸೀತಾರಾಮನ್ ನೀರು ತಂದು ಕೊಟ್ಟೇ ಬಿಟ್ಟರು.

ಈ ಒಂದು ವೀಡಿಯೋವನ್ನ ಶಾಸಕ ಅರವಿಂದ್ ಬೆಲ್ಲದ್ ತಮ್ಮ ಫೇಸ್ ಬುಕ್ ಪೇಜ್‌ ನಲ್ಲೂ ಹಂಚಿಕೊಂಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಸರಳತೆಯನ್ನೂ ಕೊಂಡಾಡಿದ್ದಾರೆ.

Edited By : Vijay Kumar
PublicNext

PublicNext

10/05/2022 10:49 pm

Cinque Terre

190.8 K

Cinque Terre

5