ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಷ್ಟೊಂದು ಬೆಲೆ ಏರಿಕೆ ಮಾಡಿದ್ರೆ ಹೇಗೆ ಮೋದಿಜೀ?: ದೇಶದ ಕಿರಿಯ ಮೇಯರ್ ಆರ್ಯಾ ಪ್ರಶ್ನೆ

ತಿರುವನಂತಪುರಂ: ಈಗಾಗಲೇ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಕನಿಷ್ಟ ಮಾಸಿಕ ವರಮಾನವೂ ಇಲ್ಲದ ಕುಟುಂಬಗಳು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿರುವಾಗ ಗೃಹಬಳಕೆಯ ಸಿಲಿಂಡರ್ ಬೆಲೆ ಮತ್ತೆ 50ರೂಪಾಯಿ ಹೆಚ್ಚಿಸಲಾಗಿದೆ.

ಸದ್ಯ ಗೃಹಬಳಕೆಯ ಸಿಲಿಂಡರ್ ಬೆಲೆ ಸಾವಿರ ಗಡಿ ದಾಟಿದೆ. ಸಾಮಾನ್ಯರು ಬೆಲೆ ಏರಿಕೆ ವಿರುದ್ಧ ಆಕ್ರೋಶಿತರಾಗಿದ್ದಾರೆ. ಈ ನಡುವೆ ಕೇರಳದ ತಿರುವನಂತಪುರಂ ಮೇಯರ್ ಆರ್ಯಾ ರಾಜೇಂದ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಇಂದು ಬೆಳಿಗ್ಗೆ ನಾನು ಮನೆ ಬಿಡುವಾಗ ನನ್ನ ತಾಯಿ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಹೀಗೆಯೇ ಮುಂದುವರಿದರೆ ನನ್ನ‌ ಮದುವೆಯ ಹೊತ್ತಿಗೆ ಸಿಲಿಂಡರ್ ಬೆಲೆ ಸುಮಾರು 3 ಸಾವಿರ ರೂ. ಆಗುತ್ತದೆ. ಈ ರೀತಿ ಗ್ಯಾಸ್ ಬೆಲೆ ಏರಿದರೆ ಕುಟುಂಬಗಳ ಅರ್ಥಿಕ ಭದ್ರತೆಯನ್ನು ನಾಶ ಮಾಡಿದಂತಾಗುತ್ತದೆ ಎಂದು 21 ವರ್ಷದ ಮೇಯರ್ ಆರ್ಯಾ ರಾಜೇಂದ್ರನ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

08/05/2022 08:21 pm

Cinque Terre

42.46 K

Cinque Terre

41

ಸಂಬಂಧಿತ ಸುದ್ದಿ