ನವದೆಹಲಿ: ಕಾಂಗ್ರೆಸ್ ನಾಯಕ ತಾವು ಯಾವ ಉದ್ದೇಶಕ್ಕಾಗಿ ರ‍್ಯಾಲಿಯಲ್ಲಿ ಭಾಗವಹಿಸುತ್ತಿರುವ ಎನ್ನುವ ವಿಚಾರವನ್ನೇ ಮರೆಯುತ್ತಾರಾ? ಇಲ್ಲವೇ ಪ್ರಚಲಿತ ವಿದ್ಯಮಾನವೇ ಅವರಿಗೆ ಗೊತ್ತಿಲ್ಲವೇ ಎನ್ನುವ ಸಂಶಯ ಮೂಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ರಾಹುಲ್ ಗಾಂಧಿ ಶುಕ್ರವಾರ ತೆಲಂಗಾಣದ ವಾರಂಗಲ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ ಅವರು ರಾಜ್ಯದ ಕಾಂಗ್ರೆಸ್ ನಾಯಕರನ್ನು ಈಗ ರಾಜ್ಯದಲ್ಲಿ ಏನು ನಡೆಯುತ್ತಿದೆ? ಭಾಷಣದಲ್ಲಿ ಏನು ಹೇಳಬೇಕು? ಎಂದು ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, "ಶುಕ್ರವಾರ ತೆಲಂಗಾಣದಲ್ಲಿ ರಾಹುಲ್ ಗಾಂಧಿ ರೈತರೊಂದಿಗೆ ತಮ್ಮ ರ‍್ಯಾಲಿಯ ಮೊದಲು, ವಿಷಯ ಏನು? ನಾನು ಏನು ಹೇಳಬೇಕು? ಎಂದು ಕೇಳುತ್ತಾರೆ. ವೈಯಕ್ತಿಕ ವಿದೇಶ ಪ್ರವಾಸಗಳು ಮತ್ತು ನೈಟ್ ಕ್ಲಬ್ ನಡುವೆ ನೀವು ರಾಜಕೀಯ ಮಾಡಿದ್ರೆ, ಇದು ಸಂಭವಿಸುತ್ತದೆ. ಉತ್ಪ್ರೇಕ್ಷಿತ ಅರ್ಹತೆ ಪ್ರಜ್ಞೆ" ಎಂದು ವ್ಯಂಗ್ಯವಾಡಿದ್ದಾರೆ.
PublicNext
08/05/2022 01:47 pm