ದಾವಣಗೆರೆ: ನನ್ನ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ವಿರೋಧದ ಮಧ್ಯೆಯೂ ಸಾಲ ಮನ್ನಾ ಮಾಡಿದೆ. 14 ತಿಂಗಳಲ್ಲಿ 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡುವ ಮೂಲಕ ಉತ್ತಮ ಕೆಲಸ ಮಾಡಿದೆ. ನನ್ನ ಭೇಟಿ ವೇಳೆ ನಂದು 2 ಲಕ್ಷ, ನಂದು 1.60 ಲಕ್ಷ ರೂಪಾಯಿ ಸಾಲ ಮನ್ನಾ ಆಯ್ತು ಎನ್ನುತ್ತೀರಿ. ಆದರೆ ಚುನಾವಣೆಯಲ್ಲಿ ಯಾಕೆ ನನ್ನ ಮರಿತೀರಿ? ನಾನು ಏನು ತಪ್ಪು ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಹರಿಹರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡಿದ್ದೇ ನನ್ನ ತಪ್ಪಾ? ಇಂದು ರಾಜ್ಯದಲ್ಲಿ 40% ನಡೆಯುತ್ತಿದೆ. ಪ್ರತಿ ಕೆಲಸಕ್ಕೂ 40% ಕಮಿಷನ್ ಕೊಡಬೇಕು. ಇವರಂತೆ ನನ್ನ ಕಾಲದಲ್ಲಿ ಕಮಿಷನ್ ಪಡೆದಿಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿ ಕಮಿಷನ್ ಪಡೆದಿದ್ದಾನೆ ಎಂದು ಕಾಂಗ್ರೆಸ್, ಬಿಜೆಪಿಯೇ ಚರ್ಚೆ ಮಾಡಿಲ್ಲ. ಸಾಲ ಮನ್ನಾದಲ್ಲಿ ಕಮೀಷನ್ ಪಡೆದಿದ್ದರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ನಾನು ಅರಾಮಾಗಿ ಗೆಲ್ಲಬಹುದು. ಆದರೆ ನಾನು ಹಾಗೆ ಮಾಡಿಲ್ಲ. ನಾನು ಮಾಡಿರುವ ರೈತರ ಸಾಲ ಮನ್ನಾ ದೇಶದಲ್ಲಿಯೇ ಇತಿಹಾಸ ಎಂದರೆ ತಪ್ಪಾಗಲ್ಲ. ದಯವಿಟ್ಟು ಈ ಬಗ್ಗೆ ಚಿಂತನೆ ಮಾಡಿ ಎಂದು ಹೇಳಿದರು.
PublicNext
08/05/2022 09:39 am