ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಹಣ ಕೇಳುವ ಸಂಸ್ಕೃತಿ ನಮ್ಮಲ್ಲಿ ಇಲ್ಲ: ಯತ್ನಾಳ್ ಗೆ ಟಾಂಗ್ ಕೊಟ್ಟ ರೇಣುಕಾಚಾರ್ಯ !

ದಾವಣಗೆರೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು‌ ಹಿರಿಯರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲಾ. ಸಾರ್ವಜನಿಕ ಸಮಾರಂಭಗಳಲ್ಲಿ ಈ ರೀತಿ ಮಾತ‌ನಾಡುವುದನ್ನು ಯತ್ನಾಳ್ ಬಿಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಚಿವ ಸ್ಥಾನ ಹಾಗೂ ಸಿಎಂ ಸ್ಥಾನಕ್ಕೆ ಲಾಬಿ ಎಂಬುದೇ ಇಲ್ಲ. ಈ ರೀತಿ ಮಾತನಾಡುವುದರಿಂದ ಸಿಎಂ ಹಾಗೂ ವರಿಷ್ಟರಿಗೆ ಮುಜುಗರ ಉಂಟು ಮಾಡುತ್ತದೆ. ಹಣ ಕೇಳುವ ಸಂಸ್ಕೃತಿ ನಮ್ಮಲ್ಲಿ‌ ಇಲ್ಲಾ. ಅದು ಕಾಂಗ್ರೆಸ್ ಸಂಸ್ಕೃತಿ ಎಂದು ಹೇಳಿದರು‌.

ಲಕೋಟೆ ಸಂಸ್ಕೃತಿ ನಮ್ಮಲ್ಲಿ ಎಂದಿಗೂ ಇಲ್ಲ. ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಬಿಡಬೇಕು ಎಂಬುದು ಸಿಎಂ ಹಾಗೂ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ರೇಣುಕಾಚಾರ್ಯ ತಿಳಿಸಿದರು.

ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್. ಗಾಳಿಯಲ್ಲಿ ಗುಂಡು ಹೊಡೆಯುವ ಸಂಸ್ಕೃತಿ. ಸರ್ಕಾರ ಪತನವಾಗುತ್ತದೇ ಎಂದು ಹೇಳುವುದಲ್ಲ, ಅದನ್ನು ಸಾಬೀತು ಮಾಡಿ. ಬುಟ್ಟಿಯಲ್ಲಿ ಹರಿವೆ ಹಾವಿದೇ ಎಂದು ಹೇಳುವುದಲ್ಲಾ ಅದನ್ನು ಬಿಡಿ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು‌.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕುಮಾರ ಸ್ವಾಮಿ ದಿನ ಬೆಳಗ್ಗೆಯಾದರೆ ರಾಜಿನಾಮೆ ಎಂದು ಹೇಳುತ್ತಾರೆ. ಅವರ ಅವಧಿಯಲ್ಲಿ ಎಷ್ಟು ಸಚಿವರ ರಾಜೀನಾಮೆ ಪಡೆದಿದ್ದಾರೆ. ರಾಜೀನಾಮೆ ಕೇಳುವ ನೈತಿಕತೆ ಅವರಿಗೆ ಇಲ್ಲ ಎಂದು ಟೀಕಿಸಿದರು.

Edited By :
PublicNext

PublicNext

07/05/2022 01:49 pm

Cinque Terre

42.77 K

Cinque Terre

6

ಸಂಬಂಧಿತ ಸುದ್ದಿ