ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಕ್ಕೆ ದಿವಂಗತ ಅನಂತಕುಮಾರ್ ಕೊಡುಗೆ ಅನಂತ !

ಬೆಂಗಳೂರು: ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ರಾಜ್ಯದ ನೆಲ ಜಲ ವಿಚಾರದಲ್ಲಿ ಗಟ್ಟಿ ನಿಲುವು ತಾಳುತ್ತಿದ್ದರು. ಇವರ ಕೊಡುಗೆ ಅಪಾರವಾಗಿಯೇ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಜಯನಗರದ ಅನಂತ್‌ಕುಮಾರ್ ಅವರ ಕಚೇರಿಯಲ್ಲಿ ನಡೆದ 'ಅನಂತ ಪ್ರೇರಣಾ ಕೇಂದ್ರ'ಕ್ಕೆ ಚಾಲನೆ ನೀಡಿ ಸಿಎಂ ಬೊಮ್ಮಾಯಿ ಮಾತನಾಡಿದರು.

ಬೆಂಗಳೂರು ನಗರದ ಅಭಿವೃದ್ಧಿಗೆ ಹಾಗೂ ರಾಜ್ಯದ ಎಲ್ಲ ಯೋಜನೆಗಳನ್ನ ಕಾರ್ಯಗತಗೊಳಿಸಲಿಕ್ಕೆ ಅನಂತ್‌ಕುಮಾರ್ ಸಹಕಾರ ನೀಡುತ್ತಿದ್ದರು.

ನಮ್ಮ ಮೆಟ್ರೋ, ವಿಮಾನ ನಿಲ್ದಾಣ,ಕೃಷ್ಣಾ ಮೇಲ್ದಂಡೆ ಯೋಜನೆ,ಕಾವೇರಿ ಜಲ ವಿಷಯದಲ್ಲಿ ಬಿಗಿ ನಿಲುವಿನಿಂದ ರಾಜ್ಯಕ್ಕೆ ಪರಿಹಾರ ಕೊಡಿಸುವಲ್ಲಿ ಅನಂತ್ ಪಾತ್ರ ಶ್ಲಾಘನೀಯ ಎಂದು ಸಿಎಂ ವಿವರಿಸಿದರು.

Edited By :
PublicNext

PublicNext

07/05/2022 07:19 am

Cinque Terre

44.93 K

Cinque Terre

0

ಸಂಬಂಧಿತ ಸುದ್ದಿ