ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರದಲ್ಲಿ ಗುಡುಗಿದ ಮಾಜಿ ಸಿಎಂ ಸಿದ್ಧರಾಮಯ್ಯ: ನೇಮಕಾತಿ ಪ್ರಕರಣ ಮುಚ್ಚುವ ಹುನ್ನಾರ...!

ಗದಗ: ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈಲ್ವೇ ಮಿನಿಸ್ಟರ್ ಆಗಿದ್ದಾಗ ರೈಲು ದುರಂತ ಸಂಭವಿಸಿದಾಗ ಘಟನೆಯ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಅವರು ಏನು ರೈಲು ನಡೆಸ್ತಿದ್ರಾ ಇಲ್ಲಾ. ನೈತಿಕ ಹೊಣೆ ಹೊತ್ಕೊಂಡು ರಾಜೀನಾಮೆ ಕೊಟ್ಟರು. ಈಗಿನವರಿಗೆ ಮಾನ ಮರ್ಯಾದೆ ಏನೂ ಇಲ್ಲ. ಅಕ್ರಮ ನೇಮಕಾತಿಯಲ್ಲಿ ಅಶ್ವತ್ಥ್ ನಾರಾಯಣ ಅವರ ಇಬ್ಬರು ಸಂಬಂಧಿಕರು ಸೆಲೆಕ್ಟ್ ಆಗಿದ್ದಾರೆ. ಆದರೂ ಕೂಡ ರಾಜೀನಾಮೆ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಾತನಾಡಿದ ಅವರು, ಒಬ್ಬ 5th ರ‌್ಯಾಂಕ್, ಒಬ್ಬ 10th ರ‌್ಯಾಂಕ್ ಸೆಲೆಕ್ಟ್ ಆಗಿದ್ದಾರೆ.

ಅವರ ಹತ್ತಿರ ಅಶ್ವತ್ಥ ನಾರಾಯಣ ಅವರ ಬ್ರದರ್ ದುಡ್ಡು ತೆಗೆದುಕೊಂಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಪೊಲೀಸರು ಇವರನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಯಾರ ಪ್ರಭಾವದಿಂದ ಬಿಟ್ಟಿದ್ದಾರೆ. ಅದಕ್ಕೆ ರಾಜೀನಾಮೆ ಕೊಡಿ ಅಂತಾ ಕೇಳಿದ್ದು. ಸಿಐಡಿಯಿಂದ ತನಿಖೆ ಮಾಡಿದ್ರೆ ಆಗಲ್ಲ.‌ ಅಮೃತ್ ಪೌಲ್ ಅವರನ್ನ ಯಾಕೆ ಟ್ರಾನ್ಸಫರ್ ಮಾಡಿದ್ರು. ಡಿವೈಎಸ್ ಪಿ ಅವರನ್ನು ಅರೆಸ್ಟ್ ಮಾಡಿದ್ರು,ಯಾಕೆ ಮಾಡಿದ್ದಾರೆ..? ಎಂದು ಪ್ರಶ್ನಿಸಿದರು.

ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ, ಅಕ್ರಮ ನಡೆದಿದೆ. ಇದರಲ್ಲಿ ಮಂತ್ರಿಗಳು ಶಾಮೀಲಾಗಿದ್ದಾರೆ. ಮಂತ್ರಿಗಳಿಗೆ ಗೊತ್ತಿಲ್ಲದೇ ಅಕ್ರಮ ನಡೆಯುತ್ತಾ. ಹೀಗಾಗಿ ಪ್ರಕರಣದ ನ್ಯಾಯಾಂಗ ತನಿಖೆಯಾಗ್ಬೇಕು. ಪ್ರಿಯಾಂಕ್ ಖರ್ಗೆಯವರನ್ನ ವಿಚಾರಣೆಗೆ ಕರೆಯುವ ಅಧಿಕಾರ ಅವರಿಗೆ ಇಲ್ಲ ಎಂದು ಲೇವಡಿ ಮಾಡಿದರು.

ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರೂ ಕೂಡ ರಾಜೀ‌ನಾಮೆ ನೀಡಬೇಕು. ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರ. ಬೊಮ್ಮಾಯಿ ಅವರು ಎಪ್ಪಾಯಿಂಡೆಡ್ ಚೀಫ್ ಮಿನಿಸ್ಟರ್. ಅವ್ರೇನ್ ಎಲೆಕ್ಟೆಡ್ ಚೀಫ್ ಮಿನಿಸ್ಟರಾ...? ಬೊಮ್ಮಾಯಿ ಅವರೇ ನೀವ್ಯಾಕೆ ಪೊಲೀಸರನ್ನು ಟ್ರಾನ್ಸಫರ್ ಮಾಡಿದ್ರಿ. ಅಕ್ರಮ ನಡೆದಿದೆಯೋ ಇಲ್ವೋ.. ನಡೆಯದಿದ್ರೆ, ಲೀಸ್ಟ್ ಯಾಕೆ ಕ್ಯಾನ್ಸಲ್ ಮಾಡಿದ್ರಿ. ಮರು ಪರೀಕ್ಷೆಗೆ ಯಾಕೆ ಆರ್ಡರ್ ಮಾಡಿದ್ರಿ. ರಕ್ಷಣೆ ಮಾಡ್ತಿದ್ದಾರೆ. ಮುಚ್ಚಿಹಾಕುವ ಪ್ರಯತ್ನವನ್ನೂ ಮಾಡ್ತಿದ್ದಾರೆ ಎಂದು ಸಿದ್ಧರಾಮಯ್ಯ ಗುಡುಗಿದರು.

Edited By : Nagesh Gaonkar
PublicNext

PublicNext

06/05/2022 07:51 pm

Cinque Terre

35.46 K

Cinque Terre

2

ಸಂಬಂಧಿತ ಸುದ್ದಿ