ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಗಡಿಯಲ್ಲಿ ಹೆಚ್ಚಾದ ಪಾಕ್ ಉಗ್ರರ ಕಳ್ಳ ಕಿಂಡಿಗಳು !

ಪಾಕಿಸ್ತಾನದ ಉಗ್ರರು ಭಾರತದಲ್ಲಿ ನುಸುಳಲು ಸದಾ ಏನಾದರೂ ಪ್ಲಾನ್ ಮಾಡಿಯೇ ಇರುತ್ತಾರೆ. ಅದರಂತೆ ಈಗ 150 ಅಡಿ ಉದ್ದ ಸುರಂಗ ಮಾರ್ಗವನ್ನ ತೆಗೆದಿದ್ದಾರೆ. ಅದರಲ್ಲಿ ಆಕ್ಸಿಜನ್ ಪೈಪ್ ಕೂಡ ಇರೋದು ಕೂಡ ಪತ್ತೆ ಆಗಿದೆ. ಭಾರತೀಯ ಯೋಧರು ಅದನ್ನ ಈಗ ಪತ್ತೆ ಹಚ್ಚಿದ್ದಾರೆ.

ಪಾಕಿಸ್ತಾನದ ಉಗ್ರರ ಉಪಟಳವನ್ನ ಭಾರತೀಯ ಯೋಧರು ಚೆನ್ನಾಗಿಯೆ ತಿಳಿದು ಕೊಂಡಿದ್ದಾರೆ. ಅದಕ್ಕೇನೆ ಗಡಿ ಭಾಗದಲ್ಲಿ ಸೂಕ್ತವಾದ ಭದ್ರತೆಯನ್ನೂ ಮಾಡಲಾಗುತ್ತಿದೆ.

ಜೂನ್-30 ರಂದು ಅಮರನಾಥ್ ಯಾತ್ರೆ ಶುರು ಆಗುತ್ತಿದೆ. ಇದಕ್ಕೆ ಅಡ್ಡಿಪಡಿಸಲೆಂದೇ ಉಗ್ರರು ಗಡಿ ಭಾಗದಲ್ಲಿ ಈ ಟನಲ್ ನಿರ್ಮಿಸಿದ್ದರು ಅಂತಲೇ ಅಧಿಕಾರಿಗಳು ಹೇಳಿದ್ದಾರೆ. ಭೂಗಡಿ ಹಾಗೂ ಜಲ ಗಡಿ ಸೇನೆ ಹೆಚ್ಚಿಸಲಾಗಿದೆ. ಇದರಿಂದ ಗಡಿಯಲ್ಲಿ ಉಗ್ರರ ಕಳ್ಳ ಕಿಂಡಿಗಳು ಇತ್ತೀಚಿಗೆ ಅತಿ ಹೆಚ್ಚು ಪತ್ತೆ ಆಗಿವೆ.

Edited By :
PublicNext

PublicNext

06/05/2022 03:58 pm

Cinque Terre

52.85 K

Cinque Terre

2