ಕೋಪೆನಹೇಗನ್: ಉಕ್ರೇನ್ ಹಾಗೂ ರಷ್ಯಾ ಕದನ ವಿರಾಮ ಘೋಷಿಸಬೇಕು. ಬಳಿಕ ಮಾತುಕತೆ ಮೂಲಕವೇ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಸದ್ಯ ವಿದೇಶಿ ಪ್ರವಾಸದಲ್ಲಿಯೇ ಇದ್ದಾರೆ. ಈ ವೇಳೆ ಡೆನ್ಮಾರ್ಕ್ ಗೂ ಭೇಟಿಕೊಟ್ಟಿದ್ದಾರೆ. ಡ್ಯಾನಿಶ್ ಪ್ರಧಾನಿ ಮೆಟ್ಟಿಫ್ರೆಡ್ರಿಕ್‌ಸನ್ ಜೊತೆಗೆ ಉಕ್ರೇನ್ ಬಿಕ್ಕಟ್ಟಿನಿಂದಾಗಿ ಎದುರಿಸುತ್ತಿರೋ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಚರ್ಚೆ ನಡೆಸಿದರು.
ಉಕ್ರೇನ್ ನಲ್ಲಿ ನಡೆಯುತ್ತಿರೋ ನಾಗರಿಕರ ಹತ್ಯೆಯನ್ನ ಮೋದಿ ತೀವ್ರವಾಗಿಯೇ ಖಂಡಿಸಿದ್ದಾರೆ. ಶೀಘ್ರವೇ ಉಕ್ರೇನ್ ಮತ್ತು ರಷ್ಯಾ ಯುದ್ಧ ವಿರಾಮ ಘೋಷಿಸಿ ಇರೋ ಬಿಕ್ಕಟ್ಟನ್ನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದ್ದಾರೆ.
PublicNext
04/05/2022 08:12 am