ಕೋಲಂಬೋ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಜನರು ಕೂಡ ಆಕ್ರೋಶಗೊಂಡಿದ್ದಾರೆ. ಈ ಕಾರಣದಿಂದಲೇ ಶ್ರೀಲಂಕಾದ ಗೋಟಬಾಯ ರಾಜಪಕ್ಷೆ ಸರ್ಕಾರ ಇಂದು ಇನ್ನೊಂದು ಅಗ್ನಿಪರೀಕ್ಷೆ ಎದುರಿಸಿಲಿದೆ.
ಸಂಸತ್ತಿನಲ್ಲಿ ವಿಪಕ್ಷಗಳು ಒಗಟ್ಟಿನಿಂದ ಅವಿಶ್ವಾಸ ಗೊತ್ತುವಳಿಯನ್ನ ಮಂಡಿಸುತ್ತಿವೆ. ಒಂದು ವೇಳೆ ಈ ವಿಶ್ವಾಸಕ್ಕೆ ಗೆಲುವು ಆದರೆ ಮುಗಿತು ನೋಡಿ. ಪ್ರಧಾನಿ ಮಹಿಂದಾ ರಾಜಪಕ್ಷೆ ಹಾಗೂ ಅವರ ಸಚಿವ ಸಂಪುಟ ರಾಜೀನಾಮೆ ನೀಡಲೇಬೇಕಾಗುತ್ತದೆ.
ಇವತ್ತಿನ ಈ ಒಂದು ವಿಶ್ವಾಸ ಗೊತ್ತುವಳಿ ಮಂಡನೆಯಲ್ಲಿ ಗೆಲುವು ಸಾಧಿಸೋ ಸಾಧ್ಯತೆ ಹೆಚ್ಚಿದೆ. ಆದರೆ, ಅವಿಶ್ವಾಸದಲ್ಲಿ ಸರ್ಕಾರ ಸೋತರೂ ಕೂಡ ಅಧ್ಯಕ್ಷ ಹುದ್ದೆಗೆ ಏನೂ ಸಮಸ್ಯೆ ಇಲ್ಲ ಅಂತಲೇ ತಜ್ಞರು ಹೇಳಿದ್ದಾರೆ.
PublicNext
04/05/2022 08:03 am