ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮನನ್ನು ಭೇಟಿಯಾದ ಯೋಗಿ : ಫೋಟೋ ವೈರಲ್

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಉತ್ತರಾಖಂಡದ ತಮ್ಮ ತವರು ನಗರವಾದ ಪೌರಿಯ ಪಂಚೂರ್ ಗ್ರಾಮದಲ್ಲಿರುವ ತಮ್ಮ ತಾಯಿಯನ್ನು ಭೇಟಿಯಾಗಿದ್ದಾರೆ. ಹಲವು ವರ್ಷಗಳ ನಂತರ ತಾಯಿಯನ್ನು ಭೇಟಿಯಾದ ಯೋಗಿ ಅಮ್ಮನ ಪಾದ ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಆ ಕ್ಷಣ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು 'ಮಾ' ಎಂದು ಶೀರ್ಷಿಕೆ ಬರೆದಿದ್ದಾರೆ.

ರಾಜಕೀಯ ಒತ್ತಡದ ನಡುವೆ ತಾಯಿ ಸಾವಿತ್ರಾ ದೇವಿ ಅವರನ್ನು ಭೇಟಿಯಾಗಿದ್ದಾರೆ. ಬುಧವಾರ ನಿಗದಿಯಾಗಿರುವ ತನ್ನ ಸೋದರಳಿಯನ ಕೇಶಮುಂಡನ ಸಮಾರಂಭಕ್ಕಾಗಿ ಅವರು ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಉತ್ತರಾಖಂಡ್ ಗೆ ಅಧಿಕೃತ ನಿಶ್ಚಿತಾರ್ಥ ಕಾರ್ಯಕ್ರಮ ಹಾಗೂ ಕುಟುಂಬ ಸಮಾರಂಭದಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್ ತವರಿಗೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ.

Edited By : Nirmala Aralikatti
PublicNext

PublicNext

03/05/2022 10:42 pm

Cinque Terre

35.31 K

Cinque Terre

15

ಸಂಬಂಧಿತ ಸುದ್ದಿ