ವಿಜಯಪುರ: ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಷಯ ಆಗಾಗ ಚರ್ಚೆಗೆ ಬರ್ತಾನೇ ಇರುತ್ತದೆ. ಯಾರಾದರೊಬ್ಬರು ಈ ಬಗ್ಗೆ ಹೇಳಿಕೆ ಕೊಟ್ಟು ಮರೆತು ಹೋದ ಸುದ್ದಿಯನ್ನ ಜೀವಂತ ಇಡುತ್ತಾರೆ. ಅದರಂತೆ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಹೌದು. ಸಿಎಂ ಬದಲಾವಣೆ ವಿಚಾರವನ್ನ ರಾಷ್ಟ್ರೀಯ ನಾಯಕರ ಚರ್ಚೆ ಮಾಡುತ್ತಿದ್ದಾರೆ. ಹೆಚ್ಚು ಕಡಿಮೆ ಮೇ-10 ರಂದು ಸಿಎಂ ಬದಲಾವಣೆ ಅಗಬಹುದು ಅಂತಲೇ ಬಸವರಾಜ್ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಹೇಳಿದ್ದಾರೆ.
ರಾಜ್ಯದ ಸಿಎಂ ಬದಲಾವಣೆಯ ವಿಷಯವನ್ನ ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನು ಈ ಸಲ ಸಾಮೂಹಿಕ ನಾಯಕತ್ವದ ಮೂಲಕವೇ ಬಿಜೆಪಿ ಪಕ್ಷ ಚುನಾವಣೆ ಎದುರಿಸುತ್ತದೆ.
PublicNext
03/05/2022 12:47 pm