ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೆ ನಂಟು ಅಕ್ರಮ ಹಣ ವರ್ಗಾವಣೆಯ ಆರೋಪದಡಿ ಇಡಿ ಕಸ್ಟಡಿಯಲ್ಲಿರೋ ಸಚಿವ ನವಾಬ್ ಮಲಿಕ್ ಗೆ ಮೂತ್ರಪಿಂಡದ ಸಮಸ್ಯೆ ಎದುರಾಗಿದ್ದು, ಇಲ್ಲಿಯ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನವಾಬ್ ಮಲಿಕ್ ವಕೀಲ ಈ ಬಗ್ಗೆ ನ್ಯಾಯಾಲಕ್ಕೆ ತಿಳಿಸಿದ್ದಾರೆ. ನವಾಬ್ ಮಲಿಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಮಾನವೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿದ್ದಾರೆ.
ಮಲಿಕ್ ಅವರ ಆರೋಗ್ಯದ ಬಗೆಗಿನ ಸಂಪೂರ್ಣ ವರದಿಯನ್ನ ನ್ಯಾಯಾಲಯ ಕೇಳಿದ್ದು, ಅವರ ಚಿಕಿತ್ಸೆಯನ್ನ ಆಸ್ಪತ್ರೆಯಲ್ಲಿಯೇ ಮುಂದುವರಿಸಬುಹುದೇ ಎಂಬುದರ ಕುರಿತು ಮೇ-5 ರ ಒಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಈಗ ಆದೇಶ ನೀಡಿದೆ.
PublicNext
03/05/2022 07:26 am