ದಾವಣಗೆರೆ : ಕರುನಾಡಿನಲ್ಲಿ ಕನ್ನಡವೇ ಮೊದಲು, ಮೊದಲಾಗಿರುವಂತೆ ನೋಡಿಕೊಳ್ಳಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹೇಳಿದ್ದಾರೆ.
ಜಿಲ್ಲೆಯ ಕೋಲ್ಕುಂಟೆ ಗ್ರಾಮದಲ್ಲಿ ನಡೆದ ಮೈಸೂರು ವಂಶಸ್ಥರ ಶಿಲಾಶಾಸನ ಪ್ರತಿಕೃತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಒಡೆಯರ್, “ಕರುನಾಡಿನಲ್ಲಿ ಕನ್ನಡವೇ ಮೊದಲು. ಕನ್ನಡವನ್ನೇ ಮೊದಲಾಗಿರುವಂತೆ ನೋಡಿಕೊಳ್ಳಬೇಕು. ಭಾರತದಲ್ಲಿ ಕನ್ನಡ ಹೇಗೆ ಒಂದು ಭಾಷೆಯೋ ಅದೇ ರೀತಿ ಹಿಂದಿಯೂ ಒಂದು ಭಾಷೆ ಅಷ್ಟೇ. ಎಲ್ಲಾ ಭಾಷೆಗಳಿಗೂ ಸಮಾನತೆ ನೀಡಬೇಕು” ಎಂದಿದ್ದಾರೆ.
PublicNext
02/05/2022 10:36 pm