ಕಲಬುರಗಿ : ಕುಟುಂಬ ರಾಜಕಾರಣ ಏಡ್ಸ್ ಇದ್ದಂತೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಪ್ರಧಾನಿ ಮೋದಿ ಅಭಿಯಾನ ಒಳ್ಳೆಯ ನಿರ್ಣಯ. ಒಂದೇ ಕುಟುಂಬದಲ್ಲಿ ಎಂಎಲ್ ಎ ಎಂಎಲ್ಸಿ ಎಂಪಿ ಇತರ ನಾಲ್ಕಾರು ಜನರು ಇರುವ ಸಂಪ್ರದಾಯ ಹೋಗಬೇಕು ಕುಟುಂಬ ರಾಜಕಾರಣ ಎಲ್ಲಾ ಪಕ್ಷದಲ್ಲೂ ಏಡ್ಸ ಥರ ಹರಡಿದೆ.
ಲಾಭಿ ಮಾಡೋರಿಗೆ, ಶಾಸಕರ ಶಕ್ತಿ ಪ್ರದರ್ಶನ ಮಾಡೋರಿಗೆ, ಹಣ ಬಲದವರಿಗೆ ಬಿಜೆಪಿಯಲ್ಲಿ ನಡೆಯಲ್ಲ,ಉತ್ತರ ಪ್ರದೇಶದಲ್ಲಿ ರಾಜನಾಥ್ ಸಿಂಗರ ಮಗನಿಗೇ ಮಂತ್ರಿ ಮಾಡಿಲ್ಲ ಇದರಿಂದ ನಮ್ಮಲ್ಲೂ ಕೆಲವರಿಗೆ ಪುಕು ಪುಕು ಶುರುವಾಗಿದೆ. ಅಂತವರೆಲ್ಲಾ ಜಾಕೆಟ್ ತೆಗೆದಿಟ್ಟು ಕೈಗಾರಿಕೆ ಮಾಡಿಕೊಂಡು ಇರಲಿ ರಾಜಕಾರಣಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಬಿಡಲಿ ಎಂದಿದ್ದಾರೆ.
ರಾಷ್ಟ್ರೀಯ ವಾದಿ ಪಕ್ಷ ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಹೇಳಿದಂತೆ ಮಾಡಲಿ ಎನ್ನುವ ಪ್ರೀಯಾಂಕ್ ಖರ್ಗೆ ಹೇಳಿಕೆಗೆ ಯತ್ನಾಳ ತಿರುಗೇಟು ಕೊಟ್ಟಿದ್ದಾರೆ. ಪ್ರೀಯಾಂಕ್ ಖರ್ಗೆ ಅವರೇ ಈ ವಿಚಾರದಲ್ಲಿ ಬಿಜೆಪಿಗೆ ನೀವೇ ಆದರ್ಶವಾಗಿ ನಿಮ್ಮಿಂದಲೇ ಇದು ಶುರುವಾಗಲಿ
ನೀವಾದರೂ ನಿವೃತ್ತಿಯಾಗಿ ಇಲ್ಲ ನಿಮ್ಮ ತಂದೆಗಾದ್ರೂ ನಿವೃತ್ತಿ ಮಾಡಿಸಿ ಮಾದರಿಯಾಗಿ ಎಂದಿದ್ದಾರೆ.
PublicNext
02/05/2022 08:39 pm