ಪ್ರಧಾನಿ ನರೇಂದ್ರ ಮೋದಿ ಯುರೋಪ್ನ ಮೂರು ದೇಶಗಳ ಪ್ರವಾಸಕ್ಕೆ ತೆರಳಿದ್ದು, ಇಂದು ಜರ್ಮನಿಯ ಬರ್ಲಿನ್ನಲ್ಲಿ ಲ್ಯಾಂಡ್ ಆಗಿದ್ದಾರೆ. ಈ ವೇಳೆ ಬಾಲಕನೊಬ್ಬ ಪ್ರಧಾನಿಯವರ ಎದುರು ನಿಂತು ದೇಶ ಭಕ್ತಿಯ ಹಾಡನ್ನು ಹಾಡಿ ಶಹಭಾಷ್ ಎನ್ನಿಸಿಕೊಂಡಿದ್ದಾನೆ.
ಪುಟ್ಟ ಹುಡುಗ ಹಾಡು ಹಾಡುವುದನ್ನು ಚಿಟಿಕೆ ಹೊಡೆಯುತ್ತ ಕೇಳಿದ ಪ್ರಧಾನಿ ಮೋದಿ, ಹಾಡು ಮುಗಿಯುತ್ತಿದ್ದಂತೆ ತುಂಬ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಬಾಲಕನ ಕೆನ್ನೆ ಹಿಡಿದು ಮುದ್ದು ಮಾಡಿದ್ದಾರೆ. ಈ ವಿಡಿಯೋವನ್ನು ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿ ಜರ್ಮನಿಯ ಭೇಟಿಯ ಬಳಿಕ ಡೆನ್ಮಾರ್ಕ್ ಮತ್ತು ಫ್ರಾನ್ಸ್ಗೆ ಭೇಟಿ ನೀಡಿ, ಭಾರತಕ್ಕೆ ವಾಪಸ್ ಬರಲಿದ್ದಾರೆ. ಈ ಮೂರು ದೇಶಗಳೊಂದಿಗೆ ವ್ಯಾಪಾರ, ಇಂಧನ ಮತ್ತು ಹಸಿರು ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತದ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
PublicNext
02/05/2022 02:53 pm