ಬೆಂಗಳೂರು: ರಾಜ್ಯದ 1000 ದೇವಸ್ಥಾನ,ಮಠಗಳಲ್ಲಿ ಮೇ-09 ರಿಂದ ಬೆಳಗ್ಗೆ-05 ಗಂಟೆಗೆ ಓಂಕಾರ ಹಾಗೂ ಸುಪ್ರಭಾತ ಹಾಕಲು ತೀರ್ಮಾನಿಸಲಾಗಿದೆ ಎಂದು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಅಝಾನ್ ಕೇಳಿಸದೇ ಇರೋವಷ್ಟು ಎತ್ತರದ ಧ್ವನಿಯಲ್ಲಿಯೇ ಓಂಕಾರ ಹಾಗೂ ಸುಪ್ರಭಾತವನ್ನ ಹಾಕುವ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತು ಮುಸ್ಲಿಂ ಸಮುದಾಯಕ್ಕೆ ಚಾಲೆಂಜ್ ಹಾಕುತ್ತಿದ್ದೇವೆ ಅಂತಲೇ ಮುತಾಲಿಕ್ ಹೇಳಿಕೆ ಕೊಟ್ಟಿದ್ದಾರೆ.
ಅಝಾನ್ ಮೈಕ್ ಶಬ್ಧ ನಿಲ್ಲಿಸದೇ ಇದ್ದರೇ, ನಾವು ನಮ್ಮ ಸುಪ್ರಭಾತ ಹಾಗೂ ಓಂಕಾರದ ಸೌಂಡ್ ನಿಲ್ಲಿಸೋದೇ ಇಲ್ಲ. ಈ ಒಂದು ಹೋರಾಟಕ್ಕೆ ಈಗಾಗಲೇ ಸ್ವಾಮೀಜಿಗಳು, ಧರ್ಮದರ್ಶಿಗಳು,ಹಿಂದೂ ಸಂಘಟನೆಗಳು ಸಹಕಾರ ಕೊಡ್ತಿದ್ದಾರೆ.
ನಮ್ಮ ಈ ಹೋರಾಟವನ್ನ ಸರ್ಕಾರ ತಡೆಯಲು ಮುಂದಾದರೆ, ಒಂದು ದೊಡ್ಡ ಸಂಘರ್ಷವೇ ನಡೆಯಲಿದೆ ಎಂದು ಸರ್ಕಾರಕ್ಕೆ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
PublicNext
02/05/2022 02:05 pm