ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಾಲು ಎಷ್ಟು ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಪಿಎಸ್‌ಐ ನೇಮಕ ಹಗರಣದ ಆರೋಪಿ ದಿವ್ಯಾ ಹಾಗರಗಿ ನಿವಾಸಕ್ಕೆ ಡಿ.ಕೆ ಶಿವಕುಮಾರ್ ಬಂದಿದ್ದರು. ಇದಕ್ಕೆ ಫೋಟೋ ಸಾಕ್ಷಿ ಇದೆ. ಆರೋಪಿ ದಿವ್ಯಾ ತಮಗೆ ಪರಿಚಯ ಇರೋದಾಗಿ ಡಿಕೆಶಿ ಹೇಳಿದ್ದಾರೆ. ಹಾಗೂ ಇತರ ಆರೋಪಿಗಳಾದ ರುದ್ರಗೌಡ ಪಾಟೀಲ್, ಶಿವಾನಂದ ಪಾಟೀಲ್, ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದಾರೆ. ಹಾಗಾದರೆ ಈ ಹಗರಣದಲ್ಲಿ ಡಿಕೆಶಿ ಪಾಲು ಎಷ್ಟು? ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ.
ಪ್ರೆಸ್ ಮೀಟ್ ಮಾಡಿ ಪುರಾವೆಯಿಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪಲ್ಲವೇ? ಪುರಾವೆ ಇದ್ದಿದ್ದರೆ ತನಿಖಾಧಿಕಾರಿಗಳಿಗೆ ನೀಡದೆ ಇರುವುದು ತಪ್ಪಲ್ಲವೇ? ವಿಚಾರಣೆಗೆ ಗೈರು ಹಾಜರಾಗಿದ್ದು ತಪ್ಪಲ್ಲವೇ? ಎಂಬ ಮೂರು ಪ್ರಶ್ನೆಗಳನ್ನು ಇನ್ನೊಂದು ಟ್ವೀಟ್ ಮೂಲಕ ಬಿಜೆಪಿ ಕೇಳಿದೆ.
PublicNext
30/04/2022 07:28 pm