ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನಪಟ್ಟಣ:ತಹಶೀಲ್ದಾರ್ ವರ್ಗಾವಣೆ ಜಂಗೀ ಕುಸ್ತಿಯಲ್ಲಿ ಎಚ್‌ಡಿಕೆಗೆ ಸೋಲು !

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣದ ತಹಶೀಲ್ದಾರ್ ವರ್ಗಾವಣೆ ವಿಚಾರದ ಸಿ.ಪಿ.ಯೋಗೇಶ್ವರ್ ಹಾಗೂ ಎಚ್.ಡಿ.ಕುಮಾರ್ ಸ್ವಾಮಿ ಅವರ ರಾಜಕೀಯ ಜಂಗೀ ಕುಸ್ತಿಗೆ ಅಖಾಡವೇ ಆಗಿ ಬಿಟ್ಟಿತ್ತು.

ಈ ಜಂಗೀ ಕುಸ್ತಿಯಲ್ಲಿ ಸಿ.ಪಿ.ಯೋಗೇಶ್ವರ್ ಮೇಲು ಗೈ ಸಾಧಿಸಿದ್ದಾರೆ. ಎಚ್.ಡಿ.ಕೆ. ಇಲ್ಲಿ ಚಿತ್ ಆಗಿದ್ದಾರೆ. ಹೌದು. ತಹಶೀಲ್ದಾರ್ ಎಲ್.ನಾಗೇಶ್ ಪರವಾಗಿ ಎಚ್.ಡಿ.ಕೆ ಇದ್ದರು. ಸುದರ್ಶನ್ ಪರವಾಗಿ ಸಿ.ಪಿ.ಯೋಗೇಶ್ವರ್ ನಿಂತು ಬಿಟ್ಟಿದ್ದರು.

ಈಗ ಎಲ್.ನಾಗೇಶ್ ವರ್ಗಾವಣೆ ಅಗಿದೆ. ಸುದರ್ಶನ್ ಆ ಜಾಗಕ್ಕೆ ಬಂದಿದ್ದಾರೆ.ಕಂದಾಯ ಇಲಾಖೆ ಕಾರ್ಯದರ್ಶಿ ಜಿ.ಎನ್.ಸುಶೀಲ್ ಕುಮಾರ್ ಶುಕ್ರವಾರವೇ ಆದೇಶ ಹೊರಡಿಸಿದ್ದಾರೆ.

ಎಲ್.ನಾಗೇಶ್ ಸರ್ಕಾರಕ್ಕೆ ವರದಿ ಮಾಡಿಕೊಳ್ಳಬೇಕು. ಸುದರ್ಶನ್ ಚನ್ನಪಟ್ಟಣದ ತಹಶೀಲ್ದಾರ್ ಆಗಿಯೇ ತಕ್ಷಣವೇ ಚಾರ್ಜ್ ತೆಗೆದುಕೊಳ್ಳಬೇಕು ಅಂತಲೇ ಆದೇಶ ನೀಡಲಾಗಿದೆ.

Edited By :
PublicNext

PublicNext

30/04/2022 01:27 pm

Cinque Terre

52.09 K

Cinque Terre

2

ಸಂಬಂಧಿತ ಸುದ್ದಿ