ಬೆಂಗಳೂರು: ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದದ್ದು ಗೊತ್ತೇ ಇದೆ. ಈಗ ಈ ಯುವತಿಯ ಚಿಕಿತ್ಸೆಯ ವೆಚ್ಚವನ್ನ ಸರ್ಕಾರವೇ ಭರಿಸುತ್ತಿದ್ದು, ಆರೋಗ್ಯ ಸಚಿವ ಸುಧಾಕರ್ ವೈಯುಕ್ತಿಕವಾಗಿ 5 ಲಕ್ಷ ರೂಪಾಯಿ ಕೂಡ ಕೊಟ್ಟಿರೋದಾಗಿ ಹೇಳಿಕೊಂಡಿದ್ದಾರೆ.
ಸೆಂಟ್ ಜಾನ್ಸ್ ಆಸ್ಪತ್ರೆಗೆ ಇಂದು ಸಚಿವ ಸುಧಾಕರ್ ಭೇಟಿಕೊಟ್ಟಿದ್ದಾರೆ. ಯುವತಿಯ ಆರೋಗ್ಯವನ್ನೂ ವಿಚಾರಿಸಿದ್ದಾರೆ. ಯುವತಿಗೆ ಶೇಕಡ 35 ರಷ್ಟು ಸುಟ್ಟು ಗಾಯಗಳಾಗಿವೆ. ಆಕೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಅಂತಲೂ ಮಾಧ್ಯಮದ ಮುಂದೆ ಹೇಳಿದ್ದಾರೆ.
ಆಯ್ಯಸಿಡ್ ದಾಳಿ ಮಾಡಿರೋ ಆರೋಪಯನ್ನ ಶೀಘ್ರದಲ್ಲಿಯೇ ಬಂಧಿಸಲಾಗುವುದು. ಆತನಿಗೆ ತಕ್ಕ ಶಿಕ್ಷೆಯನ್ನೂ ಕೊಡಲಾಗುವುದು ಎಂದು ಸುಧಾಕರ್ ತಿಳಿಸಿದರು.
PublicNext
30/04/2022 12:55 pm