ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ ತೀರಾ ಕಡಿಮೆ : ಸಿಎಂ ಬೊಮ್ಮಾಯಿ

ದಾವಣಗೆರೆ: ಇಂದು ರಾತ್ರಿ ನವದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಯಲ್ಲಿ ನಾಳೆ ಮುಖ್ಯಮಂತ್ರಿಗಳು ಹಾಗೂ ಸಿ.ಜೆಗಳ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ. ಇಡೀ ದಿನ ಈ ಕಾರ್ಯಕ್ರಮವೇ ಆಗುತ್ತದೆ. ನಾಡಿದ್ದು ಬೆಳಿಗ್ಗೆ ಬೇಗನೇ ವಾಪಸ್ ಆಗುತ್ತೇನೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ತೀರಾ ಕಡಿಮೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಜಗಳೂರು ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭೆ ಚುನಾವಣೆ ಸಂಬಂಧದ ಪಕ್ಷದ ಸಂಸದೀಯ ಮಂಡಳಿ ಹಾಗೂ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಭಾಷಾವಾರು ಪ್ರಾಂತ್ಯಗಳಾದ ಮೇಲೆ ಸ್ಥಳೀಯ ಭಾಷೆಗೆ ಸಾರ್ವಭೌಮತ್ವ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮತ್ವ. ಬೇರೆ ಭಾಷೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಪಿಎಸ್ ಐ ನೇಮಕಾತಿ ಹಗರಣ ಕಂಡುಹಿಡಿದು ಸಿಒಡಿಗೆ ಕೊಟ್ಟಿದ್ದೇ ನಾವು. ಸ್ವಲ್ಪ ಅನುಮಾನ ಬಂದಾಗ ಪ್ರಾಥಮಿಕ ತನಿಖೆ ಮಾಡಿ ಸಿಐಡಿ ತನಿಖೆ ನಡೆಯುತ್ತಿದೆ. ಯಾರೇ ಇರಲಿ, ಯಾರೇ ಎಷ್ಟೇ ಪ್ರಭಾವಶಾಲಿಯಾಗಿರಲಿ ಬಿಡುವುದಿಲ್ಲ. ಬೆಂಬಲ ನೀಡಿದವರ ವಿರುದ್ಧ ಕಠಿಣ ಕ್ರಮ ಖಚಿತ. ಕೆಲವರು ರಂಗೋಲಿ ಕೆಳಗೆ ನುಸುಳಿದಿದ್ದಾರೆ. ನಾವೇ ಕಂಡುಹಿಡಿದು ತನಿಖೆ ನಡೆಸುತ್ತಿದ್ದೇವೆ. ಪ್ರಾಮಾಣಿಕತೆಗೆ ಆದ್ಯತೆ ನೀಡಿದ್ದೇವೆ. ಈ ರೀತಿಯ ಹಗರಣ ಸಹಿಸಲು ಸಾಧ್ಯವಿಲ್ಲ. ಅವ್ಯವಹಾರ ಬೇಕಾಗಿಲ್ಲ, ಎಲ್ಲೇ ಇದ್ದರೂ ಸೆದೆಬಡಿಯುತ್ತೇವೆ ಎಂದು ಹೇಳಿದರು.

2 ಲಕ್ಷ ಟನ್ ಖರೀದಿಗೆ ಒಪ್ಪಿಗೆ ನೀಡಿದ್ದೇವೆ. ಮೂರ್ನಾಲ್ಕು ಜಿಲ್ಲೆಗಳಲ್ಲಿರಾಗಿಗೆ ಬೇಡಿಕೆ ಇದೆ. ನಿನ್ನೆ ಕೇಂದ್ರ ಆಹಾರ ಸಚಿವ ಜೊತೆ ಚರ್ಚೆ ನಡೆಸಿದ್ದೇನೆ. ಇನ್ನು ಎರಡರ ಲಕ್ಷ ಮೆಟ್ರಕ್ ಟನ್ ಬೇಡಿಕೆ ಇಟ್ಟಿದ್ದೇವೆ. ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

Edited By : Nagesh Gaonkar
PublicNext

PublicNext

29/04/2022 04:23 pm

Cinque Terre

52.82 K

Cinque Terre

0

ಸಂಬಂಧಿತ ಸುದ್ದಿ