ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ಸಂಕಟ ಮುಂದುವರಿದಿದೆ. ಶುಕ್ರವಾರ ಸಂಜೆ ಸಿಎಂ ಬೊಮ್ಮಾಯಿ ದೆಹಲಿಗೆ ಭೇಟಿ ನೀಡಲಿದ್ದು, ಹೈಕಮಾಂಡ್ ನಾಯಕರ ಜೊತೆ ಸಂಪುಟ ಸಂಬಂಧ ಚರ್ಚೆ ನಡೆಸುವ ಸಂಭವ ಇದೆ.
ಮೂಲಗಳ ಪ್ರಕಾರ, ಸಿಎಂ ದೆಹಲಿ ಭೇಟಿ ವೇಳೆ ಕ್ಯಾಬಿನೆಟ್ ಸರ್ಜರಿಗೆ ಅನುಮತಿ ಸಿಗುವುದು ಅನುಮಾನ. ಮೇ 3ರಂದು ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಸಂಪುಟ ಪುನಾರಚನೆ ಆಗಬಹುದು ಎಂಬ ಮಾತು ಕೇಳಿಬಂದಿವೆ.
PublicNext
28/04/2022 10:55 pm