ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಜಯ್ ದೇವಗನ್-ಸುದೀಪ್ ವಿಚಾರ ತಗೊಂಡು ಏನ್ಮಾಡ್ತೀರಿ?: ರಮೇಶ್‌ಕುಮಾರ್ ಪ್ರಶ್ನೆ

ವಿಜಯಪುರ: ಹಿಂದಿ ಹಾಗೂ ಪ್ರಾದೇಶಿಕ ಭಾಷೆ ವಿಚಾರವಾಗಿ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಡುವೆ ಟ್ವೀಟ್ ಸಮರ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಈ ವಿಚಾರ ತಗೊಂಡು ಏನು ಮಾಡುತ್ತೀರಿ? ಇದೆಲ್ಲ ಜನರಿಗೆ ಪ್ರಯೋಜನ ಇಲ್ಲ ಎಂದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 108 ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಅವುಗಳಿಗೆ ನಾವು ಪರಿಹಾರ ಹುಡುಕೋಣ. ಇವೆಲ್ಲ ಕಟ್ಟಿಕೊಂಡು ಏನಾಗಬೇಕು. ಇದು ಜನರ ಗಮನ ಬೇರೆಡೆ ಸೆಳೆಯೋದಕ್ಕೆ ಸೃಷ್ಟಿ ಮಾಡುವಂತಹ ವಿವಾದ ಎಂದು ಟೀಕಿಸಿದ್ದಾರೆ.

ಇದೇ ವೇಳೆ ದಲಿತ ಸಿಎಂ ಬಗ್ಗೆ ರಮೇಶ್ ಜಿಗಜಿಣಗಿ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾಕಪ್ಪಾ ಅವೆಲ್ಲಾ ಚರ್ಚೆ? ಯಾವ ಪಾರ್ಟಿ ಆಯ್ಕೆ ಆಗುತ್ತೋ- ಆ ಪಾರ್ಟಿಯವರು ಏನು ತೀರ್ಮಾನ ಮಾಡ್ತಾರೋ? ಸುಮ್ಮನೆ ಅವೆಲ್ಲಾ ಮಾತನಾಡುವುದರಿಂದ ಏನು ಶಕ್ತಿ ಬರುತ್ತೆ? ನಾನು ಸಿಎಂ ಆಕಾಂಕ್ಷಿ ಅಲ್ಲದಿರುವುದರಿಂದ ದಲಿತ ಸಿಎಂ ಮಾಡಿದರೆ, ಖುಷಿ ಪಡುತ್ತೇನೆ ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

28/04/2022 08:31 pm

Cinque Terre

56.01 K

Cinque Terre

6

ಸಂಬಂಧಿತ ಸುದ್ದಿ