ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದಿ ಚಿತ್ರ ನೋಡ್ತೀವಿ ಹಿಂದಿನೂ ಕಲೀತೀವಿ;ಹೇರಿಕೆ ಸಹಿಸೋದಿಲ್ಲ !

ಬೆಂಗಳೂರು:ನಾವು ಹಿಂದಿ ಸಿನಿಮಾ ನೊಡುತ್ತೇವೆ. ಹಿಂದಿಯನ್ನೂ ಕಲಿಯುತ್ತೇವೆ. ಆದರೆ, ಹಿಂದಿ ಹೇರಿಕೆಯನ್ನ ಸಹಿಸಿಕೊಳ್ಳೋದಿಲ್ಲ ಎಂದು ನಟಿ ರಮ್ಯಾ ಹೇಳಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾತೃ ಭಾಷೆ ಗುಜರಾತಿ ಆಗಿದೆ. ಆದರೆ ಅವರು ಹಿಂದಿ ಇಲ್ಲವೇ ಇಂಗ್ಲೀಷ್ ನಲ್ಲಿಯೇ ಮಾತನಾಡುತ್ತಾರೆ. ಮೊನ್ನೆ ಜಪಾನ್ ಭಾಷೆಯಲ್ಲೂ ಟ್ವೀಟ್ ಮಾಡಿದ್ದರು.

ಎಲ್ಲ ಭಾಷೆಯನ್ನ ಕಲಿಯೋದು ತಪ್ಪಲ್ಲ. ಆದರೆ ಒಂದೇ ಭಾಷೆಯನ್ನ ಹೇರಿಕೆ ಮಾಡೋದು ಸರಿ ಅಲ್ಲ ಅನ್ನೋ ಅರ್ಥದಲ್ಲಿಯೇ ರಮ್ಯಾ ರಿಯಾಕ್ಟ್ ಮಾಡಿದ್ದಾರೆ.

ಫ್ರೆಂಚ್ ಮತ್ತು ಚೀನಾದವರು ಮಾತೃ ಭಾಷೆಯೊಂದನ್ನ ಮಾತ್ರ ಮಾತನಾಡುತ್ತಿದ್ದರು. ಆದರೆ ಅವರೂ ಈಗ ಗ್ಲೋಬಲ್ ಭಾಷೆ ಇಂಗ್ಲೀಷ್‌ ಅನ್ನೇ ಮಾತನಾಡುತ್ತಾರೆ. ಇದನ್ನ ನಾವೂ ಅಳವಡಿಸಿಕೊಳ್ಳಬೇಕಿದೆ ಅಂತಲೇ ರಮ್ಯಾ ವಿವರಿಸಿದ್ದಾರೆ.

Edited By :
PublicNext

PublicNext

28/04/2022 07:43 pm

Cinque Terre

60.9 K

Cinque Terre

14

ಸಂಬಂಧಿತ ಸುದ್ದಿ