ಕೋಲಾರ: ಒಂದು ಕಲ್ಲು ಹೊಡೆದರೆ ಸಾವಿರ ಕಲ್ಲು ಹೊಡೆಯಿರಿ. ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಎಂಬ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೋಲಾರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ಮುತಾಲಿಕ್ ಎರಡು ಸಮುದಾಯಗಳ ನಡುವೆ ಒಡಕು ಮೂಡಿಸುವ ರೀತಿ ವರ್ತಿಸುತ್ತಿದ್ದಾರೆ. ಈ ರೀತಿ ಹೇಳಿಕೆಯಿಂದ ಮುಸಲ್ಮಾನರು ಪ್ರಚೋದನೆಗೆ ಒಳಗಾಗುವುದು ಬೇಡ. ನಿಮ್ಮ ರಂಜಾನ್ ತಿಂಗಳ ಉಪವಾಸವನ್ನು ಶಾಂತವಾಗಿ ಮುಗಿಸಿ. ನಂತರ ಶಾಂತ ರೀತಿಲಿ ಹೋರಾಟ ನಡೆಸಬೇಕಾಗುತ್ತದೆ ಎಂದರು. ಸಮಾಜ ಹೊಡೆಯೋ ಹೇಳಿಕೆ ಕೊಡ್ತಿರುವ ಇಂತಹ ಘಾತಕರನ್ನು ಸರ್ಕಾರ ಕೂಡಲೇ ಬಂಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಹಿಂದೂಗಳು ಮುಸ್ಲಿಮರನ್ನು ಮದುವೆಯಾಗಲಿ, ಮುಸ್ಲಿಮರು ಹಿಂದೂಗಳನ್ನು ಮದುವೆಯಾಗಲಿ ಬಿಎಇ. ಬೇಕಾಗಿದ್ರೆ ನಾನೆ ಭಟ್ಟರ ಕೆಲಸ ಕೊಡಿಸುತ್ತೇನೆ ಎಂದರು. ಈ ವಿಚಾರಗಳನ್ನು ಜನರ ಮೇಲೆ ಹೇರಿ ರಾಜಕಾರಣ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಈ ಮೂಲಕ ಕುಮಾರಸ್ವಾಮಿ ಅವರೇ ನೇರವಾಗಿ ತಾವು ಮುಸ್ಲಿಂಪರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅವರು ತಪ್ಪು ಮಾಡುದರೂ ಅಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗಳು ಒಂದು ಸಮಾಜದ ಪರ ವಕಾಲತ್ತು ವಹಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದು ಪಬ್ಲಿಕ್ ಪ್ರಶ್ನೆಯಾಗಿದೆ.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್
PublicNext
26/04/2022 06:32 pm