ವಿಜಯಪುರ: ಜೋಡೆತ್ತಿನ ತಿವಿತದಿಂದ ಸಿಎಂ ಬೊಮ್ಮಾಯಿ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ಸಮೀಪದ ಕೊಡಗಾನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆ ಅನುಷ್ಟಾನ ಮಾಡಿದ್ದಕ್ಕೆ ಬಂಟನೂರ ಗ್ರಾಮದ ರೈತರು ಸಿಎಂ ಬೊಮ್ಮಾಯಿಗೆ ಜೋಡೆತ್ತು ಗಿಫ್ಟ್ ನೀಡಲು ತಂದಿದ್ದರು. ಈ ವೇಳೆ ಜೋಡೆತ್ತುಗಳನ್ನು ನೋಡಲು ಬಂದ ಸಿಎಂ ಬೊಮ್ಮಾಯಿಗೆ ಒಂದು ಎತ್ತು ತಿವಿಯಲು ಮುಂದಾಗಿದೆ. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಕ್ಷಣಾರ್ಧದಲ್ಲೇ ತಪ್ಪಿಸಿಕೊಂಡಿದ್ದಾರೆ. ಮತ್ತು ಅಲ್ಲಿಂದ ಬೇರೆಡೆ ತೆರಳಿದ್ದಾರೆ. ತಿವಿಯಲು ಯತ್ನಿಸಿದ ಎತ್ತಿನ ಕೋಡನ್ನು ಸ್ಥಳದಲ್ಲಿದ್ದ ಎಎಸ್‌ಪಿ ರಾಮ್ ಅರಸಿದ್ದಿ ಹಿಡಿದು ಕಂಟ್ರೋಲ್‌ಗೆ ತಂದಿದ್ದಾರೆ.
PublicNext
26/04/2022 04:16 pm