ಕೋಲಾರ: 'ಯಾರೋ ಹೇಳಿದ್ರು. ನಿಮ್ಮ ಪಕ್ಷದಲ್ಲಿ ಕುಮಾರಸ್ವಾಮಿ ಒಬ್ಬರೇ ಇದ್ದಾರಲ್ಲಿ ಏನ್‌ಮಾಡ್ತೀರಿ ಅಂತ. ಆದ್ರೆ ಅವರಿಗೆ ಗೊತ್ತಿಲ್ಲ. ನಾವು 50ಹಸುಗಳಿಗೆ ಒಂದೇ ಗೂಳಿ ಕಟ್ತೀವಿ ಅಂತ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕೋಲಾರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಪದ ಹಣದಲ್ಲಿ ರಾಜಕೀಯ ಮಾಡುವವರಿದ್ದಾರೆ. ನಮ್ಮ ಪಕ್ಷದ ಮೇಲೆ ನೀವೆಲ್ಲ ವಿಶ್ವಾಸ ಇಟ್ಟಿದ್ದೀರಿ. ಅದಕ್ಕಾಗಿ ನಾವು ನಮ್ಮ ಚರ್ಮ ತೆಗೆದು ನಿಮಗೆ ಪಾದುಕೆ ಮಾಡಿ ಕೊಡಬೇಕು. ಕುಮಾರಸ್ವಾಮಿ ಅವರು ಮುಂದೊಂದು ದಿನ ರಾಜ್ಯ ಆಳುತ್ತಾರೆ ನಂತರ ದೆಹಲಿಗೂ ಹೋಗ್ತಾರೆ ಎಂದು ಸಿ.ಎಂ ಇಬ್ರಾಹಿಂ ಇದೇ ವೇಳೆ ಹೇಳಿದರು.
PublicNext
25/04/2022 10:58 pm