ದಾವಣಗೆರೆ: ಶಿವಮೊಗ್ಗದ ವಿವಿಧ ಶಾಲೆಗಳ ಮಕ್ಕಳು ನ್ಯಾಮತಿ ತಾಲೂಕಿನ ಕೊಡತಾಳು ಗುಡ್ಡದಲ್ಲಿ ಚಾರಣ ಕೈಗೊಂಡಿದ್ದಾರೆ. ಈ ಗುಡ್ಡ ಏರುವುದು ಅಷ್ಟು ಸುಲಭ ಅಲ್ಲ. ಇಂಥ ಗುಡ್ಡ ಏರಲು ಹೊರಟ ಮಕ್ಕಳಿಗೆ ಶುಭ ಕೋರಲಾಯಿತು.
ಯೂತ್ ಹಾಸ್ಟಲ್ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ಈ ಚಾರಣಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಹೊನ್ನಾಳಿ - ನ್ಯಾಮತಿ ತಾಲೂಕಿನ ಶಾಸಕ ಎಂ. ಪಿ. ರೇಣುಕಾಚಾರ್ಯ ಹಸಿರುನಿಶಾನೆ ತೋರಿದರು.
ನ್ಯಾಮತಿ ತಾಲೂಕಿನ ಕೊಡತಾಳು ಗುಡ್ಡದ ಚಾರಣದಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಈ ವಿದ್ಯಾರ್ಥಿಗಳು ಹಿಮಾಲಯ ಪರ್ವತ ಏರುವಂತಾಗಲಿ. ಯೂತ್ ಹಾಸ್ಟೆಲ್ ಅಸೋಸಿಯೇಷನ್ ಅತ್ಯುತ್ತಮ ಚಾರಣ ಹಮ್ಮಿಕೊಂಡಿದ್ದು, ಅಸೋಸಿಯೇಷನ್ ನ ಮುಂದಿನ ಎಲ್ಲಾ ಕಾರ್ಯಗಳಿಗೂ ಒಳ್ಳೆಯದಾಗಲಿ ಎಂದು ರೇಣುಕಾಚಾರ್ಯ ಶುಭ ಕೋರಿದರು.
PublicNext
24/04/2022 01:54 pm