ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಸ್ಥಾನ ಕೈ ಪಾಳಯದಲ್ಲಿ ಬಿರುಕು: ರಾಜೀನಾಮೆ ಕೊಟ್ಟಿದ್ದೇನೆಂದ ಅಶೋಕ್ ಗೆಹ್ಲೋಟ್

ನವದೆಹಲಿ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಬಿರುಕು ಹೆಚ್ಚಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ಬಣ ಹಾಗೂ ಸಚಿನ್ ಪೈಲೆಟ್ ಬಣದ ನಡುವಿನ ತಿಕ್ಕಾಟ, ಸಂಪುಟ ಪುನಾರಚನೆ ಸರ್ಕಸ್‌ನಿಂದ ರಾಜಸ್ಥಾನ ಸರ್ಕಾರದಲ್ಲಿ ತಳಮಳ ಹೆಚ್ಚಾಗಿದೆ. ಇದರ ಬೆನ್ನಲ್ಲೇ ನನ್ನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಲ್ಲಿಸಲಾಗಿದೆ ಎಂದಿದ್ದಾರೆ. ಈ ಮೂಲಕ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಸೂಚನೆ ನೀಡಿದ್ದಾರೆ.

ಸಿಎಂ ಬದಲಾವಣೆ ಪ್ರಶ್ನೆ ಪದೇ ಪದೇ ಕೇಳಬೇಕಾಗಿಲ್ಲ. ಕಾರಣ ನಾನು ಈಗಾಗಲೇ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಈ ಪತ್ರ ಶಾಶ್ವತವಾಗಿ ಇರಲಿದೆ. ಹೀಗಾಗಿ ಸಿಎಂ ಬದಲಾಯಿಸಬೇಕು ಎಂದಾಗ ನನ್ನ ರಾಜೀನಾಮೆ ಪತ್ರ ಪರಿಗಣಿಸುತ್ತಾರೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

24/04/2022 01:54 pm

Cinque Terre

49.49 K

Cinque Terre

2

ಸಂಬಂಧಿತ ಸುದ್ದಿ