ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಕೋಮು ಗಲಭೆಗೆ ಸ್ಥಳೀಯ ಕಾಂಗ್ರೆಸ್ ನಾಯಕರೇ ಕಾರಣ. ಒಂದು ವೇಳೆ ಗಲಭೆಯಲ್ಲಿ ಅವರು ಭಾಗಿ ಆಗಿಲ್ಲ ಅಂದರೆ, ಅವರೇ ಪ್ರತ್ಯಕ್ಷ ಸಾಕ್ಷಿ. ಹೀಗಾಗಿ ಅವರು ಗಲಭೆ ನಿಯಂತ್ರಣ ಮಾಡಲು ಹೋಗಿದ್ರೆ, ಗಲಭೆ ಮಾಡಿದವರ ಹೆಸರು ಹೇಳಲಿ, ಗಲಭೆಕೋರರ ಮೇಲೆ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಮಾಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಘಟನೆ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ. ಇದೊಂದು ಪೂರ್ವ ನಿಯೋಜಿತ ಕೋಮು ಗಲಭೆ. ಹು-ಧಾ ಕಮಿಷನ್ ರ ಭೇಟಿಯಾಗಿ ಬಂಧನವಾದ ಬಗ್ಗೆ ನಾನು ಸಂಪೂರ್ನ ಮಾಹಿತಿ ಪಡೆದಿದ್ದೇನೆ. 4 ರಿಂದ 5 ಸಾವಿರ ಜನ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲರನ್ನು ಬಂಧಿಸುವ ಕಾರ್ಯ ನಡೆಯಬೇಕು ಎಂದರು.
ಈಗಾಗಲೆ ಅನೇಕ ಜನ ಊರು ಬಿಟ್ಟು ಹೋಗಿದ್ದಾರೆ. ತಪ್ಪು ಮಾಡಿಲ್ಲವಾದ ಮೇಲೆ ಯ್ಯಾಕೆ ಹೋಗಬೇಕು.? ಅಮಾಯಕರನ್ನ ಬಂಧಿಸಬೇಡಿ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಹಾಗಿದ್ದರೆ ಆರೋಪಿಗಳು ಯಾರು ಎಂದು ಅವರೆ ಸ್ಪಷ್ಟ ಪಡಿಸಲಿ. ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ನಾನು ವ್ಯಸ್ತನಾಗಿದ್ದರಿಂದ ಈ ಘಟನಾ ಸ್ಥಳಕ್ಕೆ ಭೇಟಿ ನೀಡಲು ತಡವಾಗಿದೆ. ಆದಷ್ಟು ಬೇಗನೆ ಪೊಲೀಸರು ವಾಸಿಂ ಪಠಾಣ್‌ನನ್ನು ತನಿಖೆ ಮಾಡಿ ಸತ್ಯಾ ಸತ್ಯತೆಯನ್ನ ತಿಳಿಯಬೇಕಾಗಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕಿದೆ ಎಂದರು.
PublicNext
23/04/2022 03:45 pm