ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಬ್ಬೊಬ್ಬರಿಗೆ ಒಂದೊಂದು ಕಾನೂನು: ಡಿಕೆ ಟೀಕಾಪ್ರಹಾರ

ಬೆಂಗಳೂರು: ಹುಬ್ಬಳ್ಳಿ ಗಲಭೆ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರದ ಸಚಿವರು ಹಾಗೂ ಸಂಸದರು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದವರು ಭಾಗಿಯಾಗಿದ್ದರೆ, ಅವರನ್ನು ಬಂಧಿಸಲಿ, ಈವರೆಗೂ ಯಾಕೆ ಬಂಧಿಸಿಲ್ಲ? ನಮ್ಮ ಜಿಲ್ಲಾಧ್ಯಕ್ಷರು ಆ ಸ್ಥಳದಲ್ಲಿದ್ದರು ಎಂದು ಹೇಳುತ್ತಾರೆ.

ಆದರೆ,ಪರಿಸ್ಥಿತಿ ನಿಯಂತ್ರಿಸಲು, ಶಾಂತಿ ಕಾಪಾಡಲು ನಮ್ಮ ಜಿಲ್ಲಾಧ್ಯಕ್ಷರನ್ನು ಪೊಲೀಸರೇ ಅಲ್ಲಿಗೆ ಆಹ್ವಾನಿಸಿದ್ದರು. ಪೊಲೀಸರ ಆಹ್ವಾನದ ಮೇರೆಗೆ ನಮ್ಮ ಜಿಲ್ಲಾಧ್ಯಕ್ಷರು ಪೊಲೀಸ್ ಜೀಪ್ ಹತ್ತಿ ಮೈಕ್ ನಲ್ಲಿ ಎಲ್ಲರೂ ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ.

ಬಿಜೆಪಿ ನಾಯಕರು ಕೇವಲ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿ ಪಲಾಯನ ಮಾಡುತ್ತಿರುವುದೇಕೆ ? ಅವರ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಎಂದು ಡಿಕೆ ಶಿವಕುಮಾರ ಪ್ರಶ್ನೆ ಮಾಡಿದ್ದಾರೆ.

Edited By : Manjunath H D
PublicNext

PublicNext

20/04/2022 04:41 pm

Cinque Terre

40.12 K

Cinque Terre

3

ಸಂಬಂಧಿತ ಸುದ್ದಿ