ಶಿವಮೊಗ್ಗ:ರಾಜ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟು ಇಲ್ಲಾ. ರಾಜ್ಯದ ಆರ್ಥಿಕಸ್ಥಿತಿ ಚೆನ್ನಾಗಿಯೇ ಇದೆ. 15 ಸಾವಿರ ಕೋಟಿ ರೂಪಾಯಿ ಹೆಚ್ಚು ಆದಾಯವನ್ನ ಕ್ರೋಢೀಕರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿವಮೊಗ್ಗ ಚಿಕ್ಕಮಗಳೂರು ಪ್ರವಾಸದಲ್ಲಿರುವ ಸಿಎಂ ಶಿವಮೊಗ್ಗದಲ್ಲಿ ವರದಿಗಾರರಿಗೆ ಮಾಹಿತಿ ನೀಡಿದ್ರು.ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಿಗಾಗಿ ಶಿವಮೊಗ್ಗ ಪ್ರವಾಸದಲ್ಲಿದ್ದೆನೆ. ಹಲವು ಸಭೆಗಳನ್ನು ನಡೆಸಿದ್ದೆನೆ. ಶಿವಮೊಗ್ಗದಲ್ಲಿ ಸಂಘಟನೆ ಗಟ್ಟಿಯಾಗಿದೆ. ಮತ್ತಷ್ಟು ಗಟ್ಟಿಯಾಗಲು ರಾಜ್ಯ ಸಂಘಟನೆಯಿಂದ ಸೂಚನೆ ನೀಡಲಾಗಿದೆ ಎಂದು ಹೇಳಿದರು ಬೊಮ್ಮಾಯಿ.
ಶಿವಮೊಗ್ಗ ಅಭಿವೃದ್ಧಿ ನಿಟ್ಟಿನಲ್ಲಿ ಚುರುಕುಗೊಳಿಸಲು ಒತ್ತು ನೀಡಲಾಗಿದೆ. ನಾಲ್ಕೈದು ಜಿಲ್ಲೆಗಳ ಸಮಸ್ಯೆ ನಿವಾರಣೆಗೆ ಸಭೆ ಕರೆಯಲಾಗಿದೆ. ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಣೆ ಮಾಡಲಿದ್ದೆನೆ. ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಸಹ ಮಾಡಲಿದ್ದೆನೆ.
ಜೋಗದ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ.ಅಂತರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಸ್ಥಳವನ್ನಾಗಿಸಲು ಯೋಜನೆ ರೂಪಿಸಲಾಗಿದೆ ಎಂದು ಕೂಡ ವಿವರಿಸಿದರು ಬಸವರಾಜ್ ಬೊಮ್ಮಾಯಿ.
ಬೆಂಗಳೂರು ಟೆಕ್ಸ್ ಸಮ್ಮೇಳನ ನಡೆಸಲಾಗುತ್ತಿದ್ದು, ಐಟಿ, ಬಿಟಿ ಸಮಸ್ಯೆ, ಅಭಿವೃದ್ಧಿಗಳನ್ನ ಈ ಮೇಳದಲ್ಲಿ ಮಾಡಲಾಗುವುದು.
ಕರ್ನಾಟಕದ ಸಮಗ್ರ ಅಭಿವೃದ್ಧಿ ಚಿಂತಿಸಲಾಗಿದೆ. ಆರ್ಥಿಕ ಶಿಸ್ತು ತಂದು, ಆದಾಯ ಹೆಚ್ಚು ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಾಮಗಾರಿಯಲ್ಲಿ ಪರ್ಸೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಿಎಂ ಬೊಮ್ಮಾಯಿ, ಸಂತೋಷ್ ಪಾಟೀಲ್ ಕೇಸು ಬೇರೆಯದ್ದೇ ಆಗಿದೆ. ಈ ಸಂಬಂಧ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯನ್ನ ಕೆಟಿಟಿಪಿ ಕಾಯ್ದೆಯಡಿ ರಚಿಸಲಾಗಿದೆ.50 ಕೋಟಿ ರೂ. ಮೇಲಿನ ಟೆಂಡರ್ ಗಳೆಲ್ಲವೂ ಈ ಸಮಿತಿ ಮುಂದೆ ಬರಲಿದೆ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ಹೊರ ರಾಜ್ಯದಿಂದ ಬಂದಿರುವ ಮೌಲ್ವಿಗಳ ಕುರಿತು ಮಾಹಿತಿ ಕಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಬೊಮ್ಮಾಯಿ, ಪೊಲೀಸ್ ಇಲಾಖೆ ತನ್ನದೇ ರೀತಿಯಲ್ಲಿ ತನಿಖೆ ಮಾಡುತ್ತಿದೆ ಎಂದು ತಿಳಿಸಿದರು.
PublicNext
20/04/2022 02:45 pm