ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಸಂತೋಷ್ ಆತ್ಮಹತ್ಯೆ ಕೇಸ್ ತನಿಖೆ ಮುಗಿಯುವವರೆಗೆ ಸುಮ್ಮನಿರ್ತೇನೆ !

ದಾವಣಗೆರೆ: ಕೆ. ಎಸ್ ಈಶ್ವರಪ್ಪ ಅವರ ರಾಜೀನಾಮೆ ಕಾರಣರಾದ ಗುತ್ತಿಗೆದಾರ ಸಂತೋಷ ಪಾಟೀಲ್ ಬಗ್ಗೆ ಬಹಳ ವಿಚಾರಗಳಿವೆ. ಸದ್ಯಕ್ಕೆ ಬಾಯಿ‌ ಮುಚ್ಚಿಕೊಂಡು‌ ಕುಳಿತಿರುವೆ. ತನಿಖೆ ಮುಗಿಯಲಿ ಆಗ ಹೇಳುವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ದಾವಣಗೆರೆಯ ಜಿಎಂಐಟಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಆತನ ಹೆಸರಿನಲ್ಲಿ ಕೆಲಸ ಪಡೆದಿಲ್ಲ. ವರ್ಕ್ ಆರ್ಡರ್ ಕೂಡ ಇಲ್ಲ ಎಂದು ತಿಳಿಸಿದರು.

ಬೇರೆಯವರ ಹೆಸರಿನಲ್ಲಿ ಕಾಮಗಾರಿ ಪಡೆದಿರುವುದು ಸೇರಿದಂತೆ ಹತ್ತು ಹಲವಾರು ವಿಚಾರಗಳಿವೆ. ಸದ್ಯ ತನಿಖೆ ಮುಗಿಯಲಿ. ಆ ಬಳಿಕ ಈ ವಿಚಾರದ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

Edited By : Manjunath H D
PublicNext

PublicNext

19/04/2022 02:27 pm

Cinque Terre

41.34 K

Cinque Terre

1

ಸಂಬಂಧಿತ ಸುದ್ದಿ