ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನುದಾನ ಪಡೆಯೋಕೆ ಸ್ವಾಮಿಗಳು 30% ಕಮಿಷನ್ ಕೊಡಬೇಕು: ದಿಂಗಾಲೇಶ್ವರ ಶ್ರೀಗಳ ಹೇಳಿಕೆ

ಬಾಗಲಕೋಟೆ: ಸ್ವಾಮಿಗಳು ಸರ್ಕಾರದ ಅನುದಾನ ಪಡೆಯಬೇಕಾದರೆ 30% ಕಮಿಷನ್ ಕೊಡಬೇಕು. ಇಲ್ಲವಾದಲ್ಲಿ ಯಾವುದೇ ಕಾಮಗಾರಿಗಳು ಆರಂಭ ಆಗೋದೇ ಇಲ್ಲ. ಅವರ ಪಾಲು ಸೇರಿದ ನಂತರವಷ್ಟೇ ಕೆಲಸ ಮುಂದೆ ಹೋಗುತ್ತೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ಬಾಡಗಂಡಿಯಲ್ಲಿ ನಡೆದ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಮಠಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಿದೆ. ಇಂದು ಭ್ರಷ್ಟಾಚಾರದ ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ ನೋಡಿ. ಅನುದಾನದಲ್ಲಿ ಅಧಿಕಾರಿಗಳ ಕಡಿತ ಮಾಡದೇ ಅನುದಾನ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ದೆಹಲಿ, ಬೆಂಗಳೂರಿನಂತಹ ಊರಿನಲ್ಲಿ ಐಸ್ಕ್ರೀಂ ಬಿಡುಗಡೆಯಾದರೆ ನಮ್ಮ ಉತ್ತರ ಕರ್ನಾಟಕಕ್ಕೆ ಬರೋದು ಐಸ್ಕ್ರೀಂ ಕಡ್ಡಿ ಮಾತ್ರ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ದಿಂಗಾಲೇಶ್ವರ ಶ್ರೀಗಳು ಅಸಮಾಧಾನಿತರಾಗಿದ್ದಾರೆ.

Edited By : Nagesh Gaonkar
PublicNext

PublicNext

18/04/2022 10:17 pm

Cinque Terre

65.38 K

Cinque Terre

9

ಸಂಬಂಧಿತ ಸುದ್ದಿ