ಬೆಂಗಳೂರು : ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ ಸಂಪುಟಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ತಿಳಿಸಿದರು.
ಸಂಪುಟಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಇಂತಿವೆ
ಗೇಣಿದಾರರ ಮೇಲಿನ ಪ್ರಕರಣಗಳ ಕಾಯ್ದೆ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ
136 ಕೋಟಿ ಅನುದಾನ ಅಡಿ ಪುತ್ತೂರಿನಲ್ಲಿ ವೆಟರ್ನರಿ ಕಾಲೇಜ್
2 ಲಕ್ಷ ಮನೆಗಳ ನಿರ್ಮಾಣಕ್ಕೆ ಇದ್ದ ಅಡೆತಡೆ ತೆರವು, ಹೊಸ ಅರ್ಜಿ ಸಲ್ಲಿಕೆ ಗೆ ಅವಕಾಶ
ದಾವಣಗೆರೆ ಹರಿಹರ ರೈಲ್ವೇ ಮೇಲ್ಸೆತುವೆ 36.30 ಕೋಟಿ ಅನುಮೋದನೆ
ದತ್ತಾಂಶ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ
ಹಾವೇರಿ ಜಿಲ್ಲೆ ಕೆರೆ ತುಂಬಲು 105 ಕೋಟಿ ಮಂಜೂರು
ಸೋನಿ ವರ್ಲ್ಡ್ ಬಳಿ ಎಲಿವೇಟೆಡ್ ಕಾರಿಡಾರ್ ಮರು ಟೆಂಡರ್
ಇಂದಿರಾ ಕ್ಯಾಂಟಿನ್ ಗಳ ಸ್ಥಳಾಂತರಕ್ಕೆ ಸರ್ವೆ ವರದಿ ಕೇಳಿದ ಸಂಪುಟ ಕಬ್ಬಿಣದ ಅದಿರು ರಫ್ತು ವಿಚಾರ ಕ್ಯಾಬಿನೆಟ್ ನಲ್ಲಿ ಚರ್ಚೆ
ರಫ್ತು ರದ್ದು ನೀತಿಯನ್ನ ಮುಂದುವರಿಸಲು ಕ್ಯಾಬಿನೆಟ್ ನಿರ್ಧಾರ.
ಕಬ್ಬಿಣದ ಅದಿರು ರಫ್ತು ಬಗ್ಗೆ ಸುಪ್ರೀಂ ಕೋರ್ಟ್ ಮುಂದೆ ನಾಳೆ ವಿಚಾರಣೆ ಇದೆ.
ರಫ್ತು ಮಾಡುವ ಕುರಿತು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರದ ನಿಲುವನ್ನ ಕೇಳಿತ್ತು.
ಸರ್ಕಾರ ಸುಪ್ರೀಂ ಕೋರ್ಟ್ ಗೆ ಈಗಾಗಲೇ ಅಫಿಡೆವಿಟ್ ಸಲ್ಲಿಸಿದೆ.
2021 ರಲ್ಲಿ ಸರ್ಕಾರ ತೆಗೆದುಕೊಂಡಿರುವ ಗಣಿ ನೀತಿಯನ್ನ ಮುಂದುವರಿಸಿಕೊಂಡು ಹೋಗುವ ಬಗ್ಗೆ ತನ್ನ ನಿಲುವನ್ನ ಸ್ಪಷ್ಟಪಡಿಸಿದೆ.
ಕಬ್ಬಿಣದ ಅದಿರು ರಫ್ತು ಮಾಡಬಹುದು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸಿತ್ತು.
ಆದರೆ, ರಾಜ್ಯದಲ್ಲಿ ಈ ಹಿಂದಿನ ಘಟನಾವಳಿಗಳು, ಇತಿಹಾಸವನ್ನ ಗಮನದಲ್ಲಿಟ್ಟುಕೊಂಡು ಅದಿರುವ ರಫ್ತು ರದ್ದು ನೀತಿಯನ್ನೇ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
PublicNext
18/04/2022 09:26 pm