ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರದಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ ಸಿಎಂ ಬಸವರಾಜ ಬೊಮ್ಮಾಯಿ

ವಿಜಯನಗರ: ವಿಜಯನಗರದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ವಿಜಯನಗರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣಾ ರಣಕಹಳೆಯನ್ನು ಮೊಳಗಿಸಿದರು.

ವಿಜಯನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿಜಯನಗರದ ಪುಣ್ಯಭೂಮಿಯಿಂದ ನ್ಹಾಯಸಮ್ಮತ, ಸಕಾರಾತ್ಮಕ ಪ್ರಜಾಪ್ರಭುತ್ವದ ಸಮರವನ್ನು ಸಾರಿದ್ದೇವೆ. ನಿಮ್ಮೆಲ್ಲರ ಪರಿಶ್ರಮ, ನಮ್ಮ ನಾಯಕರಾದ ನರೇಂದ್ರ ಮೋದಿಯವರ ಕಾರ್ಯಕ್ರಮ ಹಾಗೂ ನಾಯಕತ್ವದಲ್ಲಿ ನಾವೆಲ್ಲರೂ ಮುನ್ನಡೆಯೋಣ. ಹೆಜ್ಜೆಗೆ ಹೆಜ್ಜೆ, ಹೆಗಲಿಗೆ ಹೆಗಲು ಕೊಟ್ಟು ನಡೆಯೋಣ. ವಿಜಯ ನಮ್ಮದು, ಕರ್ನಾಟಕದ್ದು, ಕರ್ನಾಟಕದ ಭವ್ಯ ಭವಿಷ್ಯದ್ದು. ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಸಿದ್ಧರಾಗುವಂತೆ ಕರೆ ನೀಡಿದರು.

ರೈತರು, ಮಹಿಳೆಯರು, ರಾಜ್ಯ, ರಾಷ್ಟ್ರದ ಅಖಂಡತೆ, ನ್ಯಾಯಸಮ್ಮತ ಆಡಳಿತ, ಕಾನೂನು ಸುವ್ಯವಸ್ಥೆಗಳ ಆಧಾರದ ಮೇಲೆ ನಾವು ಜನರ ಬಳಿಗೆ ಹೋಗುತ್ತೇವೆ. ಸಕಾರಾತ್ಮಕ ಚಿಂತನೆಯಿಂದ ನಮ್ಮ ಕೆಲಸವನ್ನು ಜನರ ಮುಂದಿಟ್ಟು, ಅದರ ಆಧಾರದ ಮೇಲೆ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿ, ನಿಮ್ಮ ಮನ ಗೆದ್ದು, ಪ್ರತಿಯೊಬ್ಬರ ಹೃದಯದಲ್ಲಿ, ಕಮಲವನ್ನು ಅರಳಿಸುತ್ತೇವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಮಲವನ್ನು ಅರಲಿಸಲಾಗುವುದು. ಅದಕ್ಕಾಗಿ ನಿಮ್ಮ ಬೆಂಬಲ ಇರಬೇಕು ಎಂದರು.

ವಿಜಯನಗರದ ನಡೆದ ಎರಡು ದಿನಗಳ ಸಮಾವೇಶದಲ್ಲಿ ಹೊಸ ದಿಕ್ಸೂಚಿ, ದಾರಿ, ವಿಶ್ವಾಸ ದೊರೆಯುವ ಬಗ್ಗೆ ನಮಗೆ ಶಕ್ತಿ ತುಂಬಿದೆ. 2023 ರಲ್ಲಿ ಭಾ.ಜ.ಪ ಮತ್ತೆ ಕರ್ನಾಟಕದಲ್ಲಿ ಉದಯಿಸಲಿರುವುದು ಸತ್ಯ ಎಂದರು.

ಭಾರತದ ಭವಿಷ್ಯ ನಿರ್ಮಿಸುವ ನಾಯಕ ನಮ್ಮ ಪಕ್ಷದ ಶಕ್ತಿ ನಮ್ಮ ನೀತಿ, ಕಾರ್ಯಕರ್ತರು ಮತ್ತು ನಾಯಕತ್ವ. ರಾಷ್ಟ್ರ ಮಟ್ಟದಲ್ಲಿ ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿಯವರ ನಾಯಕತ್ವ, ವಿಶ್ವವ್ಯಾಪಿ ನಾಯಕತ್ವವನ್ನು ಒಪ್ಪಿಕೊಂಡಿದೆ. ಭಾರತದ ಭವಿಷ್ಯ ನಿರ್ಮಿಸುವ ನಾಯಕ ನರೇಂದ್ರ ಮೋದಿಯವರು ಎಂದು ಜನ ಸಾರಿ ಹೇಳುತ್ತಿದ್ದಾರೆ ಎಂದರು. ಈ ಕಾರ್ಯಕ್ರಮ ಮತ್ತು ನಾಯಕತ್ವದ ಮೂಲಕ ನಾವು ರಾಷ್ಟ್ರ ಮತ್ತು ರಾಜ್ಯದ ಭವ್ಯ ಭವಿಷ್ಯ ನಿರ್ಮಿಸಲು ಹೊರಟಿದ್ದೇವೆ ಎಂದರು.

ಹೊಸ ಮನ್ವಂತರ ಈ ಪಯಣ ನಮ್ಮ ಹಿರಿಯರ ತ್ಯಾಗ , ಬಲಿದಾನ, ಪರಿಶ್ರಮದಿಂದ ದೊರೆತದ್ದು. ಇಡೀ ಭಾರತದಲ್ಲಿ ಹೊಸ ಮನ್ವಂತರವನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮೆಲ್ಲರ ಜವಾಬ್ದಾರಿ , ಹೊಸ ಭರವಸೆಯ ರೀತಿ ಕರ್ನಾಟಕ ರಾಜ್ಯವನ್ನು ಮಾದರಿ, ಸುಭಿಕ್ಷ, ಸಂಪದ್ಭರಿತ ರಾಜ್ಯವಾಗಿ ಮಾಡಲು ಸಂಕಲ್ಪ.ಮಾಡಿ, ಹಿರಿಯರ ನಿರೀಕ್ಷೆ ಗೆ ತಕ್ಕ ಹಾಗೆ ಪಕ್ಷವನ್ನು ಸಂಘಟಿಸಿ, 2023 ರಲ್ಲಿ ವಿಜಯಪಾತಾಕೆಯನ್ನು ಹಾರಿಸಬೇಕು ಎಂದರು.

Edited By : Nagesh Gaonkar
PublicNext

PublicNext

18/04/2022 05:15 pm

Cinque Terre

63.78 K

Cinque Terre

0

ಸಂಬಂಧಿತ ಸುದ್ದಿ