ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಇನ್ನೂ ಯಾಕೆ ಈಶ್ವರಪ್ಪ ಅರೆಸ್ಟ್ ಆಗಿಲ್ಲ?: ಮಾಜಿ ಐಪಿಎಸ್ ಬಾಸ್ಕರ್‌ರಾವ್ ಪ್ರಶ್ನೆ

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ವಿಶ್ವಾಸದ ಮೇಲೆ ಕೆಲಸ ಮಾಡಿದ್ದರು. ಆದ್ರೆ ಅವರಿಗೆ ಅವಮಾನ ಮಾಡಿದ್ದಕ್ಕೆ, ಹಣ ಪಾವತಿಸಲು ಹೆಚ್ಚು ಕಾಯಿದ್ದಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಈ ವಿಚಾರದಲ್ಲಿ ಮೂರು ಪಕ್ಷಗಳು ಮೊಸಳೆ ಕಣ್ಣಿರು ಹಾಕೋದು ಬಿಡಬೇಕು. ಕಾಮಗಾರಿ ಪ್ರಾರಂಭವಾದ ಬಳಿಕವಾದರೂ ಹಣ ಬಿಡುಗಡೆ ಮಾಡಿಸಬೇಕಿತ್ತು. ಸಂತೋಷ ಪಾಟೀಲ್ ಮನವಿ ಕೊಟ್ಟಿದ್ದ ವೇಳೆ ಸರ್ಕಾರ ಎಚ್ಚತ್ತುಕೊಳ್ಳಬೇಕಿತ್ತು. ಈ ಕೇಸ್‌ನ ತನಿಖೆಯನ್ನು ಸಿಐಡಿಗೆ ಕೊಡ್ತಿವಿ ಅಂತ ಯಾರೊಬ್ಬರು ಹೇಳುತ್ತಿಲ್ಲ. ಸಾಮಾನ್ಯ ಜನ ಯಾರಾದರೂ ಆತ್ಮಹತ್ಯೆಗೆ ಕಾರಣರಾಗಿದ್ದರೆ ಅವರನ್ನು ಕೂಡಲೇ ಬಂಧಿಸುತ್ತಿದ್ದರು. ಆದರೆ ಈಶ್ವರಪ್ಪ ಬಂಧನಕ್ಕೆ ಇಷ್ಟೊಂದು ವಿಳಂಬ ಆಗುತ್ತಿದೆ. ಭ್ರಷ್ಟಾಚಾರದಿಂದ ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ. ಈ ಪ್ರಕರಣದ ತನಿಖೆ ಕೋರ್ಟ್ ಕಣ್ಗಾವಲಿನಲ್ಲಿ ಆಗಬೇಕು.ಇಲ್ಲದಿದ್ರೆ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಆಗುವ ಸಾಧ್ಯತೆ ಇದೆ ಎಂದು ಬಾಸ್ಕರ್ ರಾವ್ ಹೇಳಿದ್ದಾರೆ.

Edited By : Manjunath H D
PublicNext

PublicNext

16/04/2022 03:03 pm

Cinque Terre

46.74 K

Cinque Terre

18

ಸಂಬಂಧಿತ ಸುದ್ದಿ