ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟ ಎನ್ನುವವರೊಬ್ಬರಿದ್ದರೆ ಅದು ಡಿಕೆ ಶಿವಕುಮಾರ್ ಮಾತ್ರ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟ ಎನ್ನುವವರೊಬ್ಬರಿದ್ದರೆ ಅದು ಡಿಕೆಶಿ. ತಿಹಾರ್ ಜೈಲು ಸೇರಿ ಗಡ್ಡ ಬೆಳೆಸಿದ ಮಾತ್ರಕ್ಕೆ ಡಿ.ಕೆ. ಶಿವಕುಮಾರ್ ಅವರ ಪಾಪಕರ್ಮಗಳು ಬತ್ತಿ ಹೋಗುವುದೇ? ಭ್ರಷ್ಟತೆಯ ಪಾಪಕೂಪದಲ್ಲಿ ಮುಳುಗೇಳುತ್ತಿರುವವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಹಾಸ್ಯಾಸ್ಪದವಲ್ಲವೇ? ಎಂದು ಪ್ರಶ್ನೆ ಮಾಡಿರುವ ರಾಜ್ಯ ಬಿಜೆಪಿ 'ಅನೈತಿಕ ಕಾಂಗ್ರೆಸ್' ಎಂದು ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್ ಮಾಡಿದೆ.
ಸುಮಾರು 50 ದಿನಗಳ ತಿಹಾರ್ ಜೈಲು ವಾಸ. ಜೈಲಿನಿಂದ ಬಂದ ಕೂಡಲೇ ಕೆಪಿಸಿಸಿ ಅಧ್ಯಕ್ಷ ಪಟ್ಟ. ಇಷ್ಟೆಲ್ಲಾ ಗೌರವ ಯಾವುದೇ ಸ್ವತಂತ್ರ ಹೋರಾಟಕ್ಕಾಗಲ್ಲ. ಅಕ್ರಮ ಸಂಪಾದನೆ ಮಾಡಿದ್ದಕ್ಕಾಗಿ. ಹವಾಲ ವಹಿವಾಟು ನಡೆಸಿದ್ದಕ್ಕಾಗಿ ಇದೆಲ್ಲ ಕಾಂಗ್ರೆಸ್ ಬೋಧಿಸುವ ನೈತಿಕತೆಯೇ? ಎಂದು ಟ್ವೀಟ್ ಮೂಲಕ ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದೆ.
PublicNext
16/04/2022 01:37 pm