ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್‌ನವರು ತಾವೇ ಜಡ್ಜ್ ಆಗಬೇಕೆಂದು ಬಯಸುತ್ತಾರೆ: ಸಿಎಂ

ಬೆಂಗಳೂರು: ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಪ್ರಾಥಮಿಕ ತನಿಖೆ ಮುಗಿದ ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂತೋಷ್ ಸಾವಿನ ಬಗ್ಗೆ ವಿ‍ಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುತ್ತದೆ. ಅದರ ಆಧಾರಿತವಾಗಿ ಅಲ್ಲಿ ನಡೆದಿದ್ದೇನು ಎಂಬುದು ವೈಜ್ಞಾನಿಕವಾಗಿ ಸತ್ಯ ತಿಳಿಯಲಿದೆ. ನಂತರ ಉನ್ನತ ತನಿಖೆ ಆದೇಶದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಜಾರ್ಜ್ ಮೇಲೆ ಇದೇ ರೀತಿ ಆರೋಪ ಬಂದಿತ್ತು. ಆಗ ಅವರ ವಿರುದ್ಧ ಎಫ್‌ಐಆರ್ ಆಗಿತ್ತಾ? ಅವರನ್ನು ಅರೆಸ್ಟ್ ಮಾಡಿದ್ದರಾ? ನೊಂದ ಕುಟುಂಬಸ್ಥರು ಕೋರ್ಟ್ ಮೊರೆ ಹೋದ ನಂತರ ಎಫ್‌ಐಆರ್ ಹಾಕಲಾಗಿದೆ. ನಾವು ಸಂತೋಷ್ ಕುಟುಂಬಸ್ಥರ ದೂರು ಯಥಾವತ್ತಾಗಿ ತೆಗೆದುಕೊಂಡಿದ್ದೇವೆ. ನಂತರ ತನಿಖೆ ಪ್ರಕಾರ ಸೆಕ್ಷನ್ ಹಾಕುತ್ತೇವೆ. ಪ್ರಕರಣದಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಆದ್ರೆ ಈ ವಿಚಾರದಲ್ಲಿ ಕಾಂಗ್ರೆಸ್‌ನವರು ತಾವೇ ಲಾಯರ್ ಆಗಿ, ತಾವೇ ಜಡ್ಜ್ ಆಗಬೇಕು ಎಂದುಕೊಂಡಿದ್ದಾರೆ. ಅವರು ಏನು ಬೇಕಾದ್ದು ಮಾತಾಡಿದ್ರೂ ನಡೆಯುತ್ತೆ ಅಂದ್ರೆ ಹೇಗೆ? ಅದಕ್ಕೆ ಕಾನೂನು ಇದೆ. ಕೋರ್ಟ್ ಇದೆ. ಅಲ್ಲಿ ಎಲ್ಲ ವಿಚಾರಣೆ ಆಗುತ್ತೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

Edited By :
PublicNext

PublicNext

16/04/2022 11:38 am

Cinque Terre

43.01 K

Cinque Terre

8

ಸಂಬಂಧಿತ ಸುದ್ದಿ