ಬೆಂಗಳೂರು: ನಾನ್ಯಾಕೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಹಠಕ್ಕೆ ಬಿದ್ದಿದ್ದ ಸಚಿವ ಈಶ್ವರಪ್ಪ, ಪ್ರಧಾನಿ ಹೇಳಿದ ಒಂದೇ ಒಂದು ಮಾತಿನಿಂದ ಧಿಡೀರ್ ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ ಎಂಬ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.
ಈ ಘಟನೆ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತಂದಿದೆ. ಹೀಗಾಗಿ ನೀವು ರಾಜೀನಾಮೆ ನೀಡಬೇಕೆಂದು ಹೈಕಮಾಂಡ್ ಈಶ್ವರಪ್ಪರಿಗೆ ಸೂಚನೆ ನೀಡಿತ್ತು. ಆದ್ರೆ ನಾಯಕರೊಬ್ಬರು ಈಶ್ವರಪ್ಪ ರಾಜೀನಾಮೆಯನ್ನು ತಡೆಹಿಡಿದಿದ್ದರು ಎನ್ನಲಾಗಿದೆ. ಇದಾದ ಬಳಿಕ ಹೈಕಮಾಂಡ್ ಸೂಚಿಸಿದರೂ ರಾಜೀನಾಮೆ ನೀಡದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಿಟ್ಟಾಗಿದ್ದರು. ಮತ್ತು ರಾಜೀನಾಮೆ ತಡೆಹಿಡಿದಿದ್ದ ಹೈಕಮಾಂಡ್ ನಾಯಕನಿಗೂ ಮೋದಿ ಕ್ಲಾಸ್ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಇದಾದ ನಂತರ ಹೈಕಮಾಂಡ್ ನಾಯಕರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಸಿಎಂ ಸೂಚನೆ ಮೇರೆಗೆ ಈಶ್ವರಪ್ಪ ತನ್ನ ನಿರ್ಧಾರ ಬದಲಾಯಿಸಿ ಇಂದು ಸಂಜೆ ಶಿವಮೊಗ್ಗದ್ದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.
PublicNext
14/04/2022 07:57 pm