ಬೆಳಗಾವಿ: ನನ್ನ ಸಿಡಿ ತಯಾರಿಸಿದ್ದ 'ಮಹಾನ್ ನಾಯಕನೇ' ಸಂತೋಷ್ ಪಾಟೀಲ ಪ್ರಕರಣದಲ್ಲೂ ಭಾಗಿ ಆಗಿದ್ದಾರೆ. ನನ್ನ ಸಿಡಿ ತಯಾರಿಸಿದ ಟೀಂನವರೇ ಇದರಲ್ಲೂ ಷಡ್ಯಂತ್ರ ಮಾಡಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, "ಸಂತೋಷ್ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಲಿ. ಯಾವುದೇ ಕಾರಣಕ್ಕೂ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಬಾರದು. ತನಿಖೆಯಲ್ಲಿ ತಪ್ಪಿತಸ್ಥನೆಂದು ಸಾಬೀತಾದರೆ ರಾಜೀನಾಮೆ ನೀಡಲಿ. ಅಲ್ಲಿಯವರೆಗೂ ಈಶ್ವರಪ್ಪ ಅವರು ರಾಜೀನಾಮೆ ನೀಡಬಾರದು" ಎಂದು ಹೇಳಿದ್ದಾರೆ.
ಸಂತೋಷ್ ಪಾಟೀಲ್ ನನ್ನ ಹಳೆಯ ಕಾರ್ಯಕರ್ತ. ಸೋಮವಾರ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಮಾಡಿ ಎಲ್ಲವನ್ನೂ ಬಿಚ್ಚಿಡುತ್ತೇನೆ. ಈ ಕೇಸ್ ಹಿಂದೆಯೂ ಮಹಾನಾಯಕ ಇದ್ದಾನೆ. ನನ್ನ ಸಿಡಿ ಕೇಸ್‌ನಲ್ಲಿ ಇದ್ದ ಮಹಾನಾಯಕನ ತಂಡ ಸಂತೋಷ ಕೇಸ್‌ನಲ್ಲೂ ಇದೆ. ಆ ನಾಯಕನ ಟೀಂ ಇಲ್ಲಿ ಕೆಲಸ ಮಾಡಿದೆ. ಎರಡೂ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
PublicNext
14/04/2022 05:19 pm