ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೈಂ ಬಂದಾಗ ಪರ್ಸಂಟೇಜ್ ಬಗ್ಗೆ ಮಾತಾಡ್ತೀನಿ: ಎಚ್.ಡಿ ರೇವಣ್ಣ

ಹಾಸನ: ನಾನು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುವಷ್ಟು ಬೆಳೆದಿಲ್ಲ. ಈ ವಿಚಾರವಾಗಿ ರಾಜ್ಯ ಸರ್ಕಾರವಿದೆ. ಅದು ಅದರ ತೀರ್ಮಾನ ಕೈಗೊಳ್ಳಲಿದೆ. ನಾನು ಈಗ ಏನೂ ಮಾತನಾಡಲ್ಲ. ಟೈಂ ಬರ್ಲಿ, ಪರ್ಸೆಂಟೇಜ್ ಬಗ್ಗೆ ಮಾತನಾಡುವೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ.

ಇಂದು ಬೇಲೂರಿ ಶ್ರೀ ಚೆನ್ನಕೇಶವಸ್ವಾಮಿ ತೇರಿನಲ್ಲಿ ಭಾಗವಹಿಸಿ, ಬಳಿಕ ಮಾತನಾಡಿದ ಅವರು, ರಾಜ್ಯದ ಜನರಿಗೆ ಆರೋಗ್ಯ ಕೊಡಲಿ, ರೈತರಿಗೆ ಸಮೃದ್ಧಿಯಾಗಿ ಬೆಳೆ ಬರುವಂತೆ ಮಳೆ ಬರಲಿ, ಯಾವುದೇ ಕಷ್ಟ ಬಾರದಂತೆ ಕಾಪಾಡಲಿ ಎಂಬುದಾಗಿ ಆ ಚೆನ್ನಕೇಶವಸ್ವಾಮಿಯಲ್ಲಿ ಬೇಡಿಕೊಂಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ಕೇಳಿದಂತ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಲಿದೆ. ಆ ವಿಷಯದ ಬಗ್ಗೆ ಮಾತನಾಡುವಷ್ಟು ಮಟ್ಟಕ್ಕೆ ಬೆಳೆದಿಲ್ಲ. ಗುತ್ತಿಗೆ ಹಣ ಬಿಡುಗಡೆಯಲ್ಲಿ ಪರ್ಸೆಂಟೇಜ್ ಬಗ್ಗೆ ಸಮಯ ಬಂದಾಗ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

13/04/2022 08:40 pm

Cinque Terre

40.84 K

Cinque Terre

1

ಸಂಬಂಧಿತ ಸುದ್ದಿ