ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಸ್ಥಾನ್ ಕಾಂಗ್ರೆಸ್‌ ಮುಖಂಡನ ಪುಂಡಾಟ- ವಿಡಿಯೋ ವೈರಲ್

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಅಶೋಕ್ ಗೆಹ್ಲೋಟ್ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಿಜೆಪಿ ಮತ್ತೊಮ್ಮೆ ಪ್ರಶ್ನಿಸಿದೆ. ಗಂಗಾನಗರದ ಕಾಂಗ್ರೆಸ್ ಮುಖಂಡರೊಬ್ಬರು ಯುವಕನಿಗೆ ಮನಬಂದಂತೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರದಿಯ ಪ್ರಕಾರ, ಕಾಂಗ್ರೆಸ್ ಮುಖಂಡರೊಬ್ಬರು ಸೋಮವಾರ ಸಂಜೆ ರಾಯಲ್ ರೈಲ್ವೆ ಕ್ರಾಸಿಂಗ್‌ಗೆ ಹೋಗುತ್ತಿದ್ದರು. ಈ ವೇಳೆ ಗೇಟ್ ಮುಚ್ಚಿದ್ದು, ಕಾರಿನ ಚಾಲಕ ರವೀಂದ್ರ ಸಿಂಗ್ ಅಜಾಗರೂಕತೆಯಿಂದ ರಿವರ್ಸ್ ಗೇರ್ ಹಾಕಿದ್ದಾರೆ. ಪರಿಣಾಮವಾಗಿ ಕಾಂಗ್ರೆಸ್‌ ಮುಖಂಡನ ವಾಹನಕ್ಕೆ ಸ್ಕ್ರಾಚ್ ಆಗಿದೆ. ತನ್ನ ತಪ್ಪಿಗೆ ಚಾಲಕ ಕ್ಷಮೆಯಾಚಿಸಿದರೂ ಕಾಂಗ್ರೆಸ್‌ ಮುಖಂಡ ಕೋಲು ಹಿಡಿದು ಅಮಾನುಷವಾಗಿ ಥಳಿಸಿದ್ದಾನೆ.

ಈ ವಿಡಿಯೋವನ್ನು ಟ್ವೀಟ್‌ ಮಾಡಿರುವ ಬಿಜೆಪಿ ನಾಯಕರು, 'ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನನಗೆ ಅಧಿಕಾರದ ಅಮಲು ಇಲ್ಲ ಎಂದು ಹೇಳಿದ್ದರು. ಆದರೆ ಇದನ್ನ ನೋಡಿ ರಾಜಸ್ಥಾನ ಕಾಂಗ್ರೆಸ್ ನಾಯಕನ ಅಧಿಕಾರದ ನಶೆ' ಎಂದು ಕುಟುಕಿದ್ದಾರೆ.

Edited By : Vijay Kumar
PublicNext

PublicNext

13/04/2022 05:43 pm

Cinque Terre

42.41 K

Cinque Terre

4

ಸಂಬಂಧಿತ ಸುದ್ದಿ