ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಕಳಕಪ್ಪ ಬಂಡಿ ಮೇಲೆ ಬಿಸಿಯಾದ ಬಿ.ಸಿ ಪಾಟೀಲ್: ಕಾರಣವೇನು?

ಗದಗ: ಜಿಲ್ಲೆಯಲ್ಲಿ‌ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ದಂಧೆ ತಡೆಯುವ ಕುರಿತಂತೆ ಶಾಸಕ ಕಳಕಪ್ಪ ಬಂಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ನಡುವೆ ಮಾತಿನ ಸಮರ ನಡೆದಿದೆ‌.

ಕೆಡಿಪಿ ಸಭೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯುವ ಕುರಿತಂತೆ ವಿಷಯ ಪ್ರಸ್ತಾಪ ಆಗಿದೆ‌. ಈ ಬಗ್ಗೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಚಿವ ಬಿ.ಸಿ ಪಾಟೀಲ್ ಸೂಚಿಸಿದ್ದಾರೆ.

ಇದಕ್ಕೆ ಅಸಮಾಧಾನಿತರಾದ ಶಾಸಕ ಕಳಕಪ್ಪ ಬಂಡಿ, ಬಿಗಿ ಕ್ರಮ ಜಾರಿ ಮಾಡಿದರೆ‌ ಇಲ್ಲಿನವರು ಮನೆ ನಿರ್ಮಿಸಲು ಅಮೆರಿಕದಿಂದ ಮರಳು ತರಬೇಕಾ? ನೀವು ಅಧಿಕಾರಿಗಳಿಗೆ ಈ ರೀತಿ ನಿರ್ದೇಶನ ಕೊಟ್ಟು ಹೋದರೆ ಅವರು ಅದನ್ನೇ ಮಾಡ್ತಾರೆ.‌ ಆಮೇಲೆ ಸ್ಥಳೀಯ ಜನರಿಗೆ ನಾವೇನು ಉತ್ತರ ಕೊಡೋದು? ಎಲ್ಲಿಂದ ಮರಳು ತರಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಆಕ್ರೋಶಗೊಂಡ ಸಚಿವ ಬಿ.ಸಿ ಪಾಟೀಲ್ ಕಾನೂನು ಪ್ರಕಾರ ಆಡಳಿತ ನಡೆಸಬೇಕಾಗುತ್ತದೆ. ಅಧಿಕಾರಿಗಳಿರುವ ಸಭೆಯಲ್ಲಿ ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ‌ನಿಮಗೆ ನಾನು ಗದಗ ಉಸ್ತುವಾರಿ ಆಗಿದ್ದು ಅಸಮಾಧಾನ ಇದ್ದರೆ ಸಿಎಂಗೆ ಹೇಳಿ ಬದಲಾಯಿಸಿಕೊಳ್ಳಿ. ನೀವು ಏನೇ ಹೇಳಿದರೂ ನನ್ನ ಕಾರ್ಯವೈಖರಿ ಬದಲಾಗೋದಿಲ್ಲ ಎಂದರು.

ನಂತರ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಪರಿಸ್ಥಿತಿ ತಿಳಿಗೊಳಿಸಿದರು.

Edited By : Nagaraj Tulugeri
PublicNext

PublicNext

11/04/2022 08:07 pm

Cinque Terre

29.78 K

Cinque Terre

0

ಸಂಬಂಧಿತ ಸುದ್ದಿ