ಬೆಂಗಳೂರು : ಬೆಂಗಳೂರಿನ ಜೆಜೆ ನಗರದ ಚಂದ್ರು ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮದ್ ಖಾನ್ ವಿವಾದವೊಂದನ್ನು ಸೃಷ್ಠಿಸಿದ್ದಾರೆ. ಚಂದ್ರುನನ್ನು ಕೊಲೆ ಮಾಡಿದ ಆರೋಪಿಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. ಚಾಕುವಿನಿಂದ ಚುಚ್ಚಿದಾಗ ನರ ಕಟ್ಟಾಗಿ ಸತ್ತುಹೋದನಂತೆ. ಹಾಗಾದ ಮಾತ್ರಕ್ಕೆ ಸುಮ್ಮನಾಗಬೇಕಿಲ್ಲ. ಅವನು ಮಾಡಿದ ತಪ್ಪಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.
ಚಂದ್ರುವಿನ ತೊಡೆಯ ಭಾಗಕ್ಕೆ ಚಾಕು ಚುಚ್ಚಿದ್ದರಿಂದ ಯಾವುದೋ ನರ ಕಟ್ಟಾಗಿ ರಕ್ತಸ್ರಾವವಾಗಿದೆ. ಇಲ್ಲದಿದ್ದರೆ ಚಂದ್ರು ಸಾಯುತ್ತಿರಲಿಲ್ಲ. ವಿಕ್ಟೋರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಷ್ಟರಲ್ಲಿ ರಕ್ತಸ್ರಾವದಿಂದ ಸತ್ತು ಹೋಗಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಜಮೀರ್ ಹೇಳಿಕೆ ಶಾಸಕರೇ ಹಂತಕರ ಪರವಾಗಿ ನಿಂತಿದ್ದಾರೆ ಎನ್ನುವ ಆರೋಪಗಳಿಗೆ ಪುಷ್ಠಿ ನೀಡುವಂತಿದೆ.
PublicNext
11/04/2022 06:08 pm