ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು: ಬಿಎಸ್‌ವೈ

ಬೆಂಗಳೂರು: ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕೆಲವು ಕಿಡಿಗೇಡಿಗಳು ಸೌಹಾರ್ದತೆ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆಯನ್ನು ನೀಡಿದ್ದಾರೆ. ಅಂಥವರಿಗೆ ನಾನೂ ಕೂಡ ಕಿವಿ ಮಾತು ಹೇಳಲು ಬಯಸುತ್ತೇನೆ. ಯಾರೂ ಸಾಮರಸ್ಯ ಕದಡಬೇಡಿ, ಮುಸ್ಲಿಮರು ನೆಮ್ಮದಿ-ಗೌರವದಿಂದ ಬಾಳಬೇಕಿದೆ. ಇನ್ಮುಂದೆ ಅಹಿತಕರ ಘಟನೆಗೆ ಅವಕಾಶ ಕೊಡದಿರಲಿ. ಕೆಲ‌ ಕಿಡಿಗೇಡಿಗಳು ಸೌಹಾರ್ದತೆ ಕೆಡಿಸುವ ಕೆಲಸ ಮಾಡುತ್ತಿದ್ದಾರೆ' ಎಂದರು.

ನಾಳೆಯಿಂದ 3 ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಪಕ್ಷ ಬಲಪಡಿಸಲು ಈ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸುತ್ತೇವೆ. ಮುಂದಿನ ಚುನಾವಣೆ ಸಿದ್ಧತೆಗಾಗಿ ಈ ರಾಜ್ಯ ಪ್ರವಾಸ. ಇನ್ಮುಂದೆ ನಿರಂತರವಾಗಿ ರಾಜ್ಯ ಪ್ರವಾಸಗಳು ನಡೆಯುತ್ತವೆ ಎಂದು ತಿಳಿಸಿದರು.

Edited By : Vijay Kumar
PublicNext

PublicNext

11/04/2022 05:46 pm

Cinque Terre

23.5 K

Cinque Terre

13

ಸಂಬಂಧಿತ ಸುದ್ದಿ