ಬೆಂಗಳೂರು : ರಾಜಕೀಯ ಹಗ್ಗ ಜಗ್ಗಾಟದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳು ಸಾಮಾನ್ಯ. ಸದ್ಯ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಡಿಕೆಶಿಗೆ ಯಾರು ಅಡಿಯಾಳಾಗಿರುತ್ತಾರೋ ಅವರಿಗೆ ಪಟ್ಟ ಎಂದು ಖಾರವಾಗಿ ಟ್ವೀಟ್ ಮಾಡಿದೆ.
ಹೌದು ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆ ಇಲ್ಲ.ಕೆಪಿಸಿಸಿಯ ಭ್ರಷ್ಟಾಧ್ಯಕ್ಷರ ಪರ್ಸೆಂಟೇಜ್ ರಾಜಕೀಯ ಬಯಲು ಮಾಡಿದ ಸಲೀಂ ಅಹ್ಮದ್ ಗೆ ಗೇಟ್ ಪಾಸ್ ನೀಡಿದರು. ಅದೇ ಭ್ರಷ್ಟಾಧ್ಯಕ್ಷರ ಪರ್ಸೆಂಟೇಜ್ ರಾಜಕೀಯಕ್ಕೆ ಹೂಂ ಗುಟ್ಟಿದ ಉಗ್ರಪ್ಪಗೆ ಉಪಾಧ್ಯಕ್ಷ ಪಟ್ಟ ನೀಡಿದ್ದಾರೆ ಎಂದು ಟ್ವೀಟಿಸಿದೆ.
ಒಟ್ಟಿನಲ್ಲಿ ಡಿಕೆಶಿಗೆ ತಲೆಬಾಗಿದವರಿಗೆ ಪಟ್ಟ ಸಿಗುತ್ತದೆ ಎಂದು ಟ್ವೀಟ್ ಮಾಡಿದೆ.
PublicNext
11/04/2022 04:54 pm