ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಮಲ್ ಪಂತ್ ಪರ ನಿಂತ ಆಮ್ ಆದ್ಮಿ ಭಾಸ್ಕರ್ ರಾವ್ !

ಬೆಂಗಳೂರು: ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಈಗ ರಾಜಕೀಯ ಶುರು ಮಾಡಿದ್ದಾರೆ. ಜೆಜೆ ನಗರದ ಚಂದ್ರು ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ ಆಮ್ ಆದ್ಮಿ ಪಕ್ಷದ ಭಾಸ್ಕರ್ ರಾವ್.

ಪೊಲೀಸ್ ಕಮಿಷನರ್ ಕಮಲ್ ಪಂತ್ ಮೇಲೆ ಬಿಜೆಪಿ ನಾಯಕರು ವಾಗ್ದಾಳಿ ಮಾಡಿದ್ದಾರೆ. ಕಮಲ್ ಪಂತ್ ಸುಳ್ಳಗಾರ ಎಂದು ಆರೋಪ ಮಾಡ್ತಿದ್ದಾರೆ. ಆದರೆ, ಕಮಲ್ ಪಂತ್ ಒಂದೂವರೆ ಕೋಟಿ ಜನರ ರಕ್ಷಣೆ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ನಾಯಕರ ಈ ಹೇಳಿಕೆಗಳು ಸರಿ ಅಲ್ಲವೇ ಅಲ್ಲ. ಇದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸರ್ಕಾರಕ್ಕೆ ಅ ಗೌರವ ತೋರಿದಂತೆ ಎಂದು ಟ್ವಿಟರ್ ಮೂಲಕವೇ ಭಾಸ್ಕರ್ ರಾವ್ ಹೇಳಿದ್ದಾರೆ.

Edited By :
PublicNext

PublicNext

11/04/2022 10:20 am

Cinque Terre

86.96 K

Cinque Terre

29

ಸಂಬಂಧಿತ ಸುದ್ದಿ