ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ರಾಮ ನವಮಿ ಆಚರಿಸಿದ ಮುಸ್ಲಿಂ ಯುವಕರು !

ತುಮಕೂರು: ರಾಜ್ಯದೆಲ್ಲೆಡೆ ಇಂದು ಶ್ರೀ ರಾಮ ನವಮಿ ಆಚರಿಸಲಾಗುತ್ತಿದೆ. ಎಲ್ಲೆಡೆ ಶ್ರೀ ರಾಮನ ಸ್ಮರಣೆನೂ ಕೇಳುತ್ತಲೇ ಇದೆ. ಆದರೆ ಇದರ ಮಧ್ಯೆ ತುಮಕೂರಿನಲ್ಲಿ ಮುಸ್ಲಿಂ ಯುವಕರು ಶ್ರೀ ರಾಮ ನವಮಿ ಆಚರಿಸಿ ನಾವೆಲ್ಲ ಒಂದು ಎಂದು ಸಾರಿ, ಸಾರಿ ಹೇಳಿದ್ದಾರೆ.

ಹೌದು. ಸದ್ಯದ ಪರಿಸ್ಥಿತಿಯಲ್ಲಿ ಇದು ನಿಜಕ್ಕೂ ವಿಶೇಷವೇ ಆಗಿದೆ. ತುಮಕೂರು ನಗರದ ಭದ್ರಮ್ಮ ಸರ್ಕಲ್ ನಲ್ಲಿ ಯುವ ಕಾಂಗ್ರೆಸ್‌ ನಿಂದ ಶ್ರೀ ರಾಮ ನವಮಿ ಆಚರಿಸಲಾಗಿದೆ.

ಇಲ್ಲಿಯೇ ಹಿಂದೂ ಮತ್ತು ಮುಸ್ಲಿಂ ಯುವಕರು ಒಟ್ಟಿಗೆ ಸೇರಿ ನಾವೆಲ್ಲ ಒಂದೇ ಎಂದು ಭಾವೈಕ್ಯತೆ ಪ್ರದರ್ಶಿಸಿದ್ದಾರೆ. ಶ್ರೀ ರಾಮ್ ಎಂದು ಘೋಷಣೆಯನ್ನೂ ಕೂಗಿದ್ದಾರೆ.

Edited By :
PublicNext

PublicNext

10/04/2022 11:56 am

Cinque Terre

55.34 K

Cinque Terre

48

ಸಂಬಂಧಿತ ಸುದ್ದಿ